ದೇಶ ಅಭಿವೃದ್ಧಿಗೆ ಸಿಪಿಐಎಂ ಪಕ್ಷವೇ ಪರ್ಯಾಯ

27 MANJU 09
Published on

ಹೊಸಪೇಟೆ: ಬಂಡವಾಳಶಾಹಿ ರಾಜಕೀಯ ಪ್ರಭುತ್ವ ಕಿತ್ತುಹಾಕಿ ದುಡಿಯುವ ರೈತ ಕಾರ್ಮಿಕರ ಪರವಾದ ಆಡಳಿತದಿಂದ ದೇಶದ ಜನರು ಸಮೃದ್ಧಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಬೇಕಾದರೆ ಸಿಪಿಐಎಂ ಪಕ್ಷವೇ ದೇಶಕ್ಕೆ ಪರ್ಯಾಯ ಎಂದು ಸಿಪಿಐಎಂ ಪಕ್ಷದ ಕಾರ್ಯದರ್ಶಿ ಯು.ಬಸವರಾಜ ಹೇಳಿದರು.

ಸಿಪಿಐಎಂ ಪಕ್ಷದಿಂದ ನಗರದ ಅಂಬೇಡ್ಕರ್ ವೃತ್ತದ ಬಳಿ ಶುಕ್ರವಾರ ನಡೆದ ರಾಜಕೀಯ ಪ್ರಚಾರಾಂದೋಲನ ಪ್ರತಿಭಟನ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಸ್ವಾತಂತ್ರ‍್ಯ ನಂತರ ದೇಶದಲ್ಲಿ ಆಳ್ವಿಕೆ ನಡೆಸಿದ ಬಂಡವಾಳಶಾಹಿ ರಾಜಕೀಯ ಪಕ್ಷಗಳು ಆರ್ಥಿಕ ಬಲಾಡ್ಯರು ಹಾಗೂ ಭೂ ಮಾಲೀಕರ ಹಿತ ಕಾಪಾಡಿಕೊಂಡು ಬರುತ್ತಿವೆ. ಹೀಗಾಗಿ ದೇಶದಲ್ಲಿ ಬಡತನ, ನಿರುದ್ಯೋಗ, ಅಸಮಾನತೆ ತೊಲಗಿಸಲು ಸಾಧ್ಯವಿಲ್ಲ ಎಂದರು.

ಸ್ವಾತAತ್ರ‍್ಯ ಚಳವಳಿಯಲ್ಲಿ ತ್ಯಾಗಜೀವಿಗಳು ಮಾಡಿದ ಸೇವೆ, ಬಲಿದಾನದ ಮೂಲಕ ಗಳಿಸಿದ ಸ್ವಾತಂತ್ರ‍್ಯದ ಆಶಯ ಮತ್ತು ದೇಶ ಪ್ರೇಮಿಗಳು ಕಂಡ ಕನಸು ನನಸಾಗದೆ ಉಳಿದಿವೆ. ದುಡಿಯುವ ವರ್ಗದ ರೈತ, ಕೂಲಿ ಕಾರ್ಮಿಕರ ಪರವಾದ ಆಡಳಿತಕ್ಕಾಗಿ ಮತದಾರರು ಸಿಪಿಎಂ ಪಕ್ಷ ಬೆಂಬಲಿಸಿ ಬೆಳೆಸಬೇಕಿದೆ. ಏಕೆಂದರೆ ಸಿಪಿಎಂ ಆಡಳಿತದಲ್ಲಿ ಆರೋಗ್ಯ, ಶಿಕ್ಷಣ, ಬಡವರ ನಿವೇಶನ, ವಸತಿಗೆ ಆದ್ಯತೆ ನೀಡುವುದರ ಜತೆಗೆ ಸುರಕ್ಷಿತ ಆಹಾರ ಸೇವನೆಗೂ ಕಾಳಜಿ ವಹಿಸಲಾಗುತ್ತದೆ. ಇದಕ್ಕೆ ಮಾದರಿ ಕೇರಳ ರಾಜ್ಯವಾಗಿದ್ದು, ಇಲ್ಲಿ ಸಿಪಿಎಂ ಪಕ್ಷ ಅಧಿಕಾರ ನಡೆಸುತ್ತಾ ಇಡೀ ದೇಶದಲ್ಲೇ ಉತ್ತಮ ಆಡಳಿತದಲ್ಲಿ ಮೊದಲನೇ ಸ್ಥಾನದಲ್ಲಿದೆ ಎಂದರು.

ಪ್ರಮುಖರಾದ ನಾಗರತ್ನಮ್ಮ, ಆರ್.ಭಾಸ್ಕರ್ ರೆಡ್ಡಿ, ಜಂಬಯ್ಯನಾಯಕ, ಆರ್.ಎಸ್.ಬಸವರಾಜ, ಮಾಳಮ್ಮ, ಯಲ್ಲಲಿಂಗ, ಕರುಣಾನಿಧಿ, ಜಗನ್ನಾಥ, ಸ್ವಪ್ನ, ಮಲ್ಲಿಕಾರ್ಜುನ, ವಿ.ಸ್ಚಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net