ವಿಜಯನಗರದಲ್ಲಿ ಮತ್ತೆ ಕೊರೊನಾ ದೃಢ

Covid
Published on

ಹೊಸಪೇಟೆ: ವಿಜಯನಗರದಲ್ಲಿ ಮತ್ತೆ ಕೊರೊನಾ ಸೋಂಕು ಒಕ್ಕರಿಸಿದ್ದು, ನಗರದಲ್ಲಿ ಒಬ್ಬರಿಗೆ ಸೋಂಕು ದೃಢವಾಗಿದೆ. ರೋಗಲಕ್ಷಣ ಕಂಡು ಬರುವ ಎಲ್ಲರಿಗೂ ಪರೀಕ್ಷೆಗೆ ಜಿಲ್ಲಾಡಳಿತ ಸೂಚನೆ ನೀಡಲಾಗಿದೆ.

ನಗರದಲ್ಲಿ 58 ವರ್ಷದ ಮಹಿಳೆಗೆ ಸೋಂಕು ದೃಢವಾಗಿದ್ದು, ನಿಯಾಮಾನುಸಾರ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆಯು ಮುಂಬಾಯಿAದ ನಗರಕ್ಕೆ ಬಂದಿದ್ದು, ನಗಡಿ, ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಂಕಿಸಿ ಸ್ವಯಂ ಪ್ರೇರಿತವಾಗಿ ಇತ್ತೀಚೆಗೆ ಪರೀಕ್ಷೆ ಮಾಡಿಕೊಂಡಿದ್ದಾರೆ. ಶನಿವಾರ ದೃಢವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಮುಂಜಾಗ್ರತೆ ವಹಿಸುವಂತೆ ಸೂಚಿಸಿದ್ದು, ಕ್ರಮಗಳನ್ನು ಬಿಡುಗಡೆಗೊಳಿಸಿದೆ. ಗರ್ಭಿಣಿಯರು, ಮಕ್ಕಳು, ವಯಸ್ಕರು ಮಾಸ್ಕ್ ಧರಿಸುವುದು ಉತ್ತಮ. ಗುಂಪು ಪ್ರದೇಶಗಳಲ್ಲಿ ಮಾಸ್ಕ್ ಹಾಕಿಕೊಳ್ಳಲು ಸಲಹೆ. ಸ್ಯಾನಿಟೈಸರ್ ಬಳಕೆಗೆ ಸಲಹೆ, ಐಎಲ್‌ಐ, ಸ್ಯಾರಿ ಲಕ್ಷಣ ಇರುವವರು ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು. ಸಿಂಗಾಪುರ, ಹಾಂಕಾAಗ್ ಬಳಿಕ ದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಭಯಪಡದೆ ಎಚ್ಚರಿಕೆ ವಹಿಸಬೇಕು. ವಿಜಯನಗರ ಜಿಲ್ಲೆಯ 47 ಪಿಎಚ್‌ಸಿ, 7 ಸಿಎಚ್‌ಸಿ, 3 ಸಾರ್ವಜನಿಕ ಆಸ್ಪತ್ರೆಗಳು, ಒಂದು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಬೇಕು ಎಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಫೋನ್ ಮೂಲಕ ಡಿಎಚ್‌ಒಗೆ ಶಾಸಕ ಸೂಚನೆ

ನಗರದಲ್ಲಿ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಗೆ ಮಹಿಳೆ ಮೇಲೆ ನಿಗಾ ಇರಿಸಲಾಗಿದೆ. ನಗರದಲ್ಲಿ ಕೊರೋನಾ ಪಾಸಿಟಿವ್ ಬಂದಿದ್ದು, ಅಧಿಕಾರಿಗಳು ಸೂಕ್ತ ನಿಗಾ ವಹಿಸಬೇಕು ಎಂದು ಶಾಸಕ ಎಚ್.ಆರ್.ಗವಿಯಪ್ಪ ಕಮಲಾಪುರದಲ್ಲಿ ಶನಿವಾರ ಇಂದಿರಾ ಕ್ಯಾಂಟಿನ್ ಉದ್ಘಾಟನೆ ನಂತರ ಫೋನ್ ಮೂಲಕ ಡಿಎಚ್.ಒ ಶಂಕರ್‌ನಾಯ್ಕಗೆ ಸೂಚನೆ ನೀಡಿದರು.

ಭಯಪಡುವ ಅಗತ್ಯವಿಲ. ಆದರೆ ಎಚ್ಚರಿಕೆ ವಹಿಸುವುದು ಕಡ್ಡಯ. ನಗರದಲ್ಲಿ ದೃಢವಾದ ಪ್ರಕರಣದ ಹಿನ್ನೆಲೆಯಲ್ಲಿ ಇನಷ್ಟು ಮುಂಜಾಗೃತ ಕ್ರಮವಾಗಿ ಕ್ರಮಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. - ಎಂ.ಎಸ್.ದಿವಾಕರ, ಜಿಲ್ಲಾಧಿಕಾರಿ, ವಿಜಯನಗರ ನಗರದಲ್ಲಿ ಮಹಿಳೆಗೆ ಕೊರೊನಾ ಸೋಂಕು ದೃಢವಾಗಿದೆ. ಮುಂಬೈಯಿAದ ಬಂದ ಮಹಿಳೆಗೆ ಜ್ವರ, ನಗಡಿ ಕಾಣಿಕೊಂಡಿದೆ. ಇತ್ತೀಚೆಗೆ ಪರೀಕ್ಷೆ ನಡೆಸಲಾಗಿದ್ದು, ಸೋಂಕು ದೃಢವಾಗಿದೆ. ಆಸ್ಪತ್ರೆಗಳಲ್ಲಿ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಸಾರ್ವಜನಿಕರು ಭಯಪಡದೇ ಎಚ್ಚರ ವಹಿಸಬೇಕು. - ಶಂಕರ್ ನಾಯ್ಕ, ಡಿಎಚ್‌ಒ, ವಿಜಯನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net