ಹೊಸಪೇಟೆ ಕೋವಿಡ್ ಕೇರ್ ಸೆಂಟರ್ ಕರ್ತವ್ಯದಲ್ಲಿದ್ದ ನೌಕರನಿಗೆ ಹೃದಯಾಘಾತ, ಸಾವು

18082020 Hospet Covid Care Hospital worker death
Published on

ಹೊಸಪೇಟೆ (ಬಳ್ಳಾರಿ): ನಗರದ ಎಂಸಿಎಚ್ ಕೋವಿಡ್ ಕೇರ್ ಸೆಂಟರ್‌ನಲ್ಲಿ ಕಮ್ಯೂನಿಟಿ ಹೆಲ್ತ್ ಆಫಿಸರ್ ಆಗಿದ್ದ ಗುತ್ತಿಗೆ ನೌಕರ ಜಯಜಪ್ಪ (32) ಕರ್ತವ್ಯದಲ್ಲಿದ್ದಾಗಲೇ ಮಂಗಳವಾರ ಬೆಳಗ್ಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಜಿಲ್ಲೆಯ ಕೂಡ್ಲಿಗಿ ತಾಲೂಕು ಬಡೇಲಡಕು ಗ್ರಾಮದರಾದ ಇವರು, ಎಂಎಲ್‌ಎಚ್‌ಪಿ ಅಡಿ ನೇಮಕವಾಗಿದ್ದರು. ರಾತ್ರಿ ಪಾಳಯದಲ್ಲಿ ಕೆಲಸ ಮಾಡುವಾಗ ಬೆಳಗ್ಗೆ ಏಕಾಏಕಿ ಎದೆನೋವು ಕಾಣಿಸಿದೆ. ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net