ಸರ್ಕಾರದ ಆದೇಶದ ನಡುವೆಯೂ ಹೊಸಪೇಟೆಯಲ್ಲಿ ಎಂದಿನಂತೆ ನಡೆದ ತರಗತಿಗಳು

03042021 Hosapete 6-9 School running
Published on

ಹೊಸಪೇಟೆ: ಕೋವಿಡ್ ಹಿನ್ನೆಲೆಯಲ್ಲಿ ಆರರಿಂದ ಒಂಬತ್ತರವರೆಗೆ ತರಗತಿಗಳನ್ನು ಸ್ಥಗಿತಗೊಳಿಸುವಂತೆ ಸರ್ಕಾರ ಆದೇಶ ಹೊರಡಿಸಿದ್ದರೂ ನಗರದ ಕೆಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಶನಿವಾರ ಎಂದಿನಂತೆ ತೆರೆದಿದ್ದವು.

ಶನಿವಾರವಾದ್ದರಿಂದ ಬೆಳಗ್ಗೆಯೆ ತರಗತಿಗಳು ಆರಂಭಗೊಂಡವು. ಆವರಣದಲ್ಲಿ ಪ್ರಾರ್ಥನೆ ಸಲ್ಲಿಸಿದ ವಿದ್ಯಾರ್ಥಿಗಳು, ಬಳಿಕ ತರಗತಿಗಳಿಗೆ ತೆರಳಿದರು. ಈ ಕುರಿತು ಖಾಸಗಿ ಶಾಲೆ ಮುಖ್ಯಸ್ಥರನ್ನು ವಿಚಾರಿಸಿದರೆ ‘ಸ್ಥಗಿತಗೊಳಿಸುವಂತೆ ನಮಗೆ ಶಿಕ್ಷಣ ಇಲಾಖೆಯಿಂದ ಅಧಿಕೃತ ಆದೇಶ ಬಂದಿಲ್ಲ’ ಎಂದು ಪ್ರತಿಕ್ರಿಯಿಸಿದರು. ಪ್ರಭಾರ ಡಿಡಿಪಿಐ ಸಿ.ರಾಮಪ್ಪ ಸಹ ಪ್ರತಿಕ್ರಿಯಿಸಿದ್ದು ‘ಶಿಕ್ಷಣ ಇಲಾಖೆಯಿಂದ ಈವರೆಗೆ ಶಾಲೆ ಸ್ಥಗಿತಗೊಳಿಸುವ ಕುರಿತು ಆದೇಶ ಬಂದಿಲ್ಲ’ ಎಂದು ವಿಜಯವಾಣಿಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net