ಲೋಕ ಅದಾಲತ್ ನಲ್ಲಿ 5114 ಪ್ರಕರಣ ಇತ್ಯರ್ಥ

12 MANJU 04
Published on

ಹೊಸಪೇಟೆ: ನಗರದ ಏಳು ನ್ಯಾಯಾಲಯಗಳಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ 5349 ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ ಒಟ್ಟು 5114 ಪ್ರಕರಣಗಳನ್ನು ರಾಜಿ ಮುಖಾಂತರ ಇತ್ಯರ್ಥಪಡಿಸಿ ಅಂದಾಜು 9.63 ಕೋಟಿ ರೂ. ಹಣ ಸಂದಾಯವಾಗಿದೆ ಎಂದು ಘೋಷಿಸಲಾಯಿತು.

ನಗರದ ಏಳು ನ್ಯಾಯಾಲಯದಲ್ಲಿ ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಿಮಾ ಕಂಪೆನಿಗಳು, ಬ್ಯಾಂಕ್, ಕಕ್ಷಿಗಾರರು ಹಾಗೂ ಇತರ ಸರ್ಕಾರಿ ಇಲಾಖೆಯ ಸಂಪೂರ್ಣ ಸಹಕಾರದೊಂದಿಗೆ ಲೋಕ್ ಅದಾಲತನ್ನು ಯಶಸ್ವಿಯಾಗಿದೆ.

ಇದರಲ್ಲಿ ಸಿವಿಲ್ ಧಾವೆಗಳು 49, ಚಕ್ ಬೌನ್ಸ್ 124, ಕ್ರಿಮಿನಲ್ ಕಾಂಪೌAಡ್ ಎಬಲ್ ಪ್ರಕರಣಗಳು 06, ಕ್ರಿಮಿನಲ್ ಮಿಸ್ ಪ್ರಕರಣಗಳು 644, ಆಫೀಲ್ ಪ್ರಕರಣಗಳು 04, ಲಘು ಪ್ರಕರಣಗಳು 4253, ಅಪಘತ ಪ್ರಕರಣಗಳು 09, ವ್ಯಾಜ ಪೂರ್ವ ಪ್ರಕರಣಗಳು 18 ಇವೆಲ್ಲಾ ಪ್ರಕರಣಗಳು ಸೇರಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net