ಏ.17ರಿಂದ ಆಹಾರಾನಂದ ಕಿಟ್ ವಿತರಣೆ, ಸ್ವಂತ ಖರ್ಚಿನಲ್ಲಿ ಪೂರೈಕೆ; ಸಚಿವ ಆನಂದಸಿಂಗ್ ಹೇಳಿಕೆ

Anandsing
Published on

ಹೊಸಪೇಟೆ: ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯ ಬಿಪಿಎಲ್ ಮತ್ತು ಅಂತ್ಯೋದಯ ಕುಟುಂಬಗಳಿಗೆ ಆಹಾರದ ಕಿಟ್ ನೀಡಲು ಜಿಲ್ಲೆಯ ಕಾರ್ಖಾನೆಗಳಿಗೆ ದೇಣಿಗೆ ನೀಡಲು ಮನವಿ ಮಾಡಲಾಗಿತ್ತು. ಆದರೆ, ಯಾರೊಬ್ಬರೂ ಸ್ಪಂದಿಸಿಲ್ಲ. ಹಾಗಾಗಿ ಸದ್ಯ ನನ್ನ ಸ್ವಂತ ಖರ್ಚಿನಿಂದ ಕ್ಷೇತ್ರದ ಬಡ ಕುಟುಂಬಗಳಿಗೆ ಆಹಾರದ ಕಿಟ್ ನೀಡುತ್ತಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಗಣಿ ಮಾಲೀಕರು, ಕಾರ್ಖಾನೆಗಳಿಂದ ದೇಣಿಗೆ ಪಡೆದು ಆಹಾರ ನೀಡುತ್ತಾರೆ ಎಂಬದು ಸತ್ಯಕ್ಕೆ ದೂರವಾದದ್ದು. ಜಿಲ್ಲೆಯ ಜನರಿಗೆ ಕಾರ್ಖಾನೆಗಳ ಬಳಿ ದೇಣಿಗೆಗೆ ಮನವಿ ಮಾಡಿದ್ದೆ. ಆದರೆ ನಾನಾ ಕಾರಣ ಹೇಳಿ ಜಾರಿಕೊಳ್ಳುತ್ತಿದ್ದಾರೆ. ಕ್ಷೇತ್ರದ ಜನರು ಹಸಿವಿನಿಂದ ಬಳಲಬಾರದೆಂದು ಅಂದಾಜು 6 ಕೋಟಿ ರೂ.ವೆಚ್ಚದಲ್ಲಿ 60 ಸಾವಿರ ಕ್ವಾಲಿಟಿ ಆಹಾರ ಧಾನ್ಯಗಳ ಕಿಟ್ ವಿತರಿಸಲಾಗುತ್ತದೆ. ಏ.17ರಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಲಾಗುವುದು. ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ವುಳ್ಳವರಿಗೆ ಕಡ್ಡಾಯವಾಗಿ ತಲುಪುತ್ತದೆ. ಜನರು ನೂಕು ನುಗ್ಗಲು ಆಗದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಆಹಾರ ಕಿಟ್ ಪಡೆಯಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net