ಜನನ, ಮರಣ ನೋಂದಣಿಯಲ್ಲಿ ಅಕ್ಷರ ದೋಷವಾಗದಿರಲಿ

22 MANJU 04
Published on

ಹೊಸಪೇಟೆ: ಜನನ-ಮರಣ ನೋಂದಣಿಯಲ್ಲಿ ಅಕ್ಷರ ದೋಷವಾಗದಂತೆ ನಿಗಾವಹಿಸುವಂತೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಜನನ, ಮರಣಗಳ ನೋಂದಣೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಮಾನ್ಯ ಜನರಿಗೆ ತೊಂದರೆಯಾಗದAತೆ ಜನನ, ಮರಣ ನೋಂದಣಿ ವೇಳೆ ಅಕ್ಷರ ದೋಷಗಳು ಹೆಚ್ಚಾಗುತ್ತಿರುವ ಬಗ್ಗೆ ದೂರು ಹೆಚ್ಚಾಗಿರುವುದರಿಂದ ಅಧಿಕಾರಿಗಳು ನಿಗಾ ವಹಿಸಬೇಕಿದೆ. ಜನನ, ಮರಣದ ನೋಂದಣಿಯಲ್ಲಿ ದಿನಾಂಕ, ಹೆಸರು, ತಂದೆ, ತಾಯಿ, ಗಂಡ, ಹೆಂಡತಿ ಹೆಸರುಗಳ ಅಕ್ಷರ ದೋಷಗಳು ಹೆಚ್ಚಾಗುತ್ತಿವೆ. ಗಂಡು, ಹೆಣ್ಣು ನಮೂದಾಗದೇ ಇರುವುದು ಅನೇಕ ಜನರಿಗೆ ಸಮಸ್ಯೆಗಳಾಗಿವೆ. ಮರಣ ಘಟನೆಗಳ ನೋಂದಣಿ ವೇಳೆ ಮೃತರ ಅಧಾರ್ ಸಂಖ್ಯೆಯ ಬದಲಾಗಿ ಅರ್ಜಿದಾರರ ಅಧಾರ್ ಸಂಖ್ಯೆಯನ್ನು ನಮೂದಿಸಿ ನೋಂದಣಿ ಮಾಡುತ್ತಿರುವುದು ಕಂಡುಬAದಿವೆ. ಪೂರ್ಣ ಪ್ರಮಾಣದಲ್ಲಿ ಅರ್ಜಿದಾರರಿಂದ ಮಾಹಿತಿ ಮತ್ತು ವರದಿ ನಮೂನೆಗಳಾದ ಜನನ ವರದಿ-1, ಮರಣ ವರದಿ-2 ರಲ್ಲಿ ನೀಡಿದ ಮಾಹಿತಿಯನ್ನು ಜಾಗೂರಕತೆಯಿಂದ ನೋಂದಾಯಿಸಲು ಕ್ರಮ ವಹಿಸಬೇಕೆಂದು ತಿಳಿಸಿದರು.

ಬೆಳೆ ವಿಮೆ ನಿಗಧಿಗೆ ಸ್ಥಳೀಯವಾಗಿ ನಡೆಸಿದ ಬೆಳೆ ಕಟಾವು ಪ್ರಯೋಗದ ವರದಿ ಮಾಡುವಾಗ ಅಧಿಕಾರಿಗಳು ಸಮಯಕ್ಕೆ ಬೆಳೆ ಕಟಾವು ಪ್ರಯೋಗ ಮಾಡಬೇಕು. ತಂತ್ರಾAಶದಲ್ಲಿ ಅಂಕಿ ಅಂಶಗಳು ತಪ್ಪಾಗದಂತೆ ಪ್ರಯೋಗದ ವಿವರಗಳನ್ನು ಭರ್ತಿ ಮಾಡಬೇಕು. ಬೆಳೆ ಕಟಾವು ಪ್ರಯೋಗ ಪಾರದರ್ಶಕವಾಗಿ ನಡೆಯಲು ಮೂಲ ಕಾರ್ಯಕರ್ತರು, ವಿಮಾ ಕಂಪನಿಯ ಅಧಿಕಾರಿಗಳ ಸಹಯೋಗದಲ್ಲಿ ಬೆಳೆ ಕಟಾವು ಪ್ರಯೋಗದ ಸಂಧರ್ಭದಲ್ಲಿ ಕಡ್ಡಾಯವಾಗಿ ನಿಯಾಮಾನುಸಾರ ಪ್ರಯೋಗ ಕೈಗೊಳ್ಳಬೇಕು ಎಂದರು.

ಜಿಪA ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಷಾ, ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ, ಹರಪನಹಳ್ಳಿ ಉಪವಿಭಾಗಿಯಾಧೀಕಾರಿ ಚಿದಾನಂದ ಗುರುಸ್ವಾಮಿ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಎನ್.ಕೆ.ಪತ್ರಿಬಸಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net