ಆರ್‌ಬಿಐ ಹೊಸ ನೀತಿ ಕಳವಳಕಾರಿ

05 MANJU 02
Published on

ಹೊಸಪೇಟೆ: ಹಲವು ಕ್ಷೇಮಾಭಿವೃದ್ಧಿ ಸಂಘಗಳಿವೆ. ಆದರೆ, ರೈತರ ಕ್ಷೇಮಾಭಿವೃದ್ಧಿ ಮಾಡಿರುವುದು ಶ್ಲಾಘನೀಯ. ಇದರಿಂದ ಎರಡು ಜಿಲ್ಲೆಯ ರೈತರ ಯೋಗಕ್ಷೇಮ ಹಾಗೂ ಅಭಿವೃದ್ಧಿ ಆಗಲು ಗಮನ ಹರಿಸಬೇಕಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ಇಲ್ಲಿನ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ತುಂಗಭದ್ರಾ ರೈತರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ ಹಾಗೂ ಬ್ಯಾಂಕ್ ಮತ್ತು ಇಲಾಖಾಧಿಕಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ರೈತರ ಮಕ್ಕಳಿಗೆ, ವಿಶೇಷವಾಗಿ ಹೆಣ್ಣುಮಕ್ಕಳಿಗೆ ವಿಶೇಷ ಶಿಕ್ಷಣ ವ್ಯವಸ್ಥೆದ ವ್ಯವಸ್ಥೆ ಮಾಡಬೇಕಿದೆ ಎಂದರು.

ಸಹಕಾರ ಕ್ಷೇತ್ರದಲ್ಲಿ ಆಂದೋಲನದಲ್ಲಿ ನಡೆದಿದೆ. ಗ್ರಾಮ ಪಂಚಾಯಿತಿಗಳಿಗೆ ಸಹಕಾರ ಸಂಘ ಆರಂಭಕ್ಕಾಗಿ ಸಿದ್ದತೆ ನಡೆದಿದೆ. ಸಹಕಾರ ಸಂಘಗಳು ರೈತರ ಆರ್ಥಿಕ ಅನುಕೂಲಕ್ಕಾಗಿ ಹುಟ್ಟಿಕೊಂಡಿವೆ. ಸಹಕಾರದ ವಿಚಾರದಲ್ಲಿ ಆರ್‌ಬಿಐ ಹೊಸ ನೀತಿ ಕಳವಳಕಾರಿಯಾಗಿದೆ. ಪ್ರತಿವರ್ಷ 5 ಸಾವಿರ ಕೋಟಿ ರೂ. ನೀಡುವ ಬದಲು 2.3 ಕೋಟಿ ರೂ. ರಾಜ್ಯಗಳಿಗೆ ನೀಡುತ್ತಿದೆ. ನಬಾರ್ಡ್ ನಿಂದ 25 ಸಾವಿರ ಕೋಟಿ ಹಣ ನೀಡಬೇಕು. ಶೇ.60ರಷ್ಟು ಕಡಿತವಾಗಿದೆ. ಇದು ರೈತರಿಗೆ ಮಾಡಿದ ದೊಡ್ಡ ಅನ್ಯಾಯವಾಗಿದೆ ಎಂದರು.

ಕೆಲವರು ಖಾಸಗಿ ಬ್ಯಾಂಕ್ ಗಳಲ್ಲಿ ಬಡ್ಡಿ ಕಡಿಮೆ ಎಂದು ಹೋಗುತ್ತಾರೆ, ಬಡ್ಡಿ ನೋಡಿಕೊಂಡು ಹೋದರೆ, ಅಸಲು ಕೂಡ ಕಳೆದುಕೊಳ್ಳುತ್ತೇವೆ. ಬೆಳಗ್ಗೆ ಇರುವ ಕೆಲ ಸಂಸ್ಥೆಗಳಯ ರಾತ್ರೋರಾತ್ರಿ ಮುಚ್ಚಿಕೊಂಡು ಹೋಗುತ್ತವೆ. ಆದ್ದರಿಂದ ರೈತರು ಸುಸ್ಥಿತಿಯಲ್ಲಿರುವ ರಾಜ್ಯದ 25 ಸಹಕಾರ ಬ್ಯಾಂಕ್ ಗಳಲ್ಲಿ ವ್ತವಹಾರ ನಡೆಸಬೇಕಿದೆ. ರೈತರ ಹಿತ ಜತೆ, ಬ್ಯಾಂಕ್ ಅಭಿವೃದ್ಧಿ ಕೂಡ ಆಗಬೇಕಿದೆ. ಸೊಸೈಟಿ ಸಾಲ ಎಂದರೆ, ಸರ್ಕಾರದ ಅಲ್ಲ, ಅದರಲ್ಲಿ ಕೇವಲ ಬಡ್ಡಿ ಕೊಡುತ್ತದೆ. ಸಹಕಾರ ಬ್ಯಾಂಕ್ ಗಳು ರೈತರಿಗೆ ಕೊಡುವ ಸಾಲದಲ್ಲಿ ನಷ್ಟವಾದಾಗ, ಇತರೆ ಕಡೆ ಕೊಡುವ ಸಾಲದಿಂದ ಬರುವ ಲಾಭದಲ್ಲಿ ಸರಿಮಾಡುತ್ತವೆ. ಹಣದ ಜವಾಬ್ದಾರಿಯ ಗಮನ ಹರಿಸದಿದ್ದರೆ ಭವಿಷ್ಯ ಕಳೆದುಕೊಳ್ಳಬೇಕಿದೆ. ಹೆಮ್ಮೆಯಿಂದ ಸಹಕಾರ ಆಂದೋಲನ ನಡೆಯಬೇಕಿದೆ. ಇದರಲ್ಲಿ ರಾಜ್ಯದ ಕೊಡುಗೆ ಹೆಚ್ಚಿದೆ. ಸಾಲ ಮನ್ನ ಮಾಡುವ ಪ್ರಯತ್ನದಲ್ಲಿ ಸರ್ಕಾರಯಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net