

ಹೊಸಪೇಟೆ: ಕ್ರೈಸ್ತ ಮಿಷನರಿಗಳಿಂದ ಮತಾಂತರ ಯತ್ನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಲಂಬಾಣಿ ತಾಂಡಗಳ ಸೇವಾಲಾಲ್ ಹಾಗೂ ಮರಿಯಮ್ಮ ದೇಗುಲ ಸೇರಿದಂತೆ ಇತರೆ ದೇಗುಲಗಳಲ್ಲಿ ಡಿ.25ರಂದು ದೀಪೋತ್ಸವ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ.
ರಾಜ್ಯದಲ್ಲಿ 3,600ರಷ್ಟು ಲಂಬಾಣಿ ತಾಂಡಾಗಳಿವೆ. ತಾಂಡಾಗಳ ಬಡತನ, ಅನಕ್ಷರತೆಯನ್ನು ಬಳಸಿಕೊಂಡು, ಅವರಿಗೆ ಆಸೆ ತೋರಿಸಿ ಮಾಡುವ ಮತಾಂತರ ಮಾಡುವ ಯತ್ನವನ್ನು ಲಂಬಾಣಿ ಜನಾಂಗದ ಅಮಾಯಕರಿಗೆ ಕ್ರೈಸ್ತ ಮಿಷನರಿಗಳು ಮರಳು ಮಾಡುತ್ತಿದ್ದಾರೆ. ಕೆಲವು ಸುಳ್ಳು ಕಥೆಗಳನ್ನು ಹೇಳಿ ಅಮಾಯಕರಿಗೆ ಬಲವಂತವಾಗಿ ಮತಾಂತರ ಮಾಡುವುದು ಹೆಚ್ಚಾಗಿ ಕಂಡು ಬರುತ್ತಿದೆ. ಶೇ.50ರಷ್ಟು ತಾಂಡಾಗಳಿಗೆ ಕ್ರೈಸ್ತರು ಪ್ರವೇಶಿಸಿ ಮತಾಂತರ ಯತ್ನದಲ್ಲಿ ತೊಡಗಿದ್ದಾರೆ. ಈ ಪ್ರಯತ್ನ ನಿಲ್ಲಿಸಲು ಜನರಲ್ಲಿ ಜಾಗೃತಿ ಮೂಡಿಸಲು ಲಂಬಾಣಿ ತಾಂಡಾಗಳ ದೇಗುಲಗಳಲ್ಲಿ ದೀಪೋತ್ಸವ ನಡೆಸಲು ಸಿದ್ದತೆ ನಡೆಸಲಾಗಿದೆ. ನಮ್ಮ ಜಾತಿ ನಮ್ಮ ಹೆಮ್ಮೆ ಎಂದು ಬಾಳಬೇಕಿದೆ. ನಮ್ಮನ್ನು ದಬ್ಬಾಳಿಕೆ, ದೌರ್ಜನ್ಯ ಮಾಡವರ ವಿರುದ್ಧ ಹೋರಾಡಬೇಕಿದೆ. ಮತಾಂತರದಿAದ ಯಾವುದೇ ಪ್ರಯೋಜವಿಲ್ಲ. ನಮ್ಮ ಧರ್ಮ, ನಮ್ಮ ದೇವರು ನಮಗೆಲ್ಲ ಶಾಂತಿ, ಸುಖ ಕೊಡುತ್ತಿದ್ದಾನೆ. ಏನೇನೋ ತಪ್ಪು ಮಾಹಿತಿ ನೀಡಿ ಮತಾಂತರ ಮಾಡುವುದನ್ನು ರಾಜ್ಯ ಸರ್ಕಾರ ಹತ್ತಿಕ್ಕಬೇಕು ಎಂದು ಲಂಬಾಣಿಗರ ಆಗ್ರಹವಾಗಿದೆ.
ಕ್ರೈಸ್ತ ಮಿಷನರಿಗಳ ಯಾವುದೇ ರೀತಿಯ ಭಜನೆ, ಪ್ರಾರ್ಥನೆ ಚರ್ಚ್ ಒಳಗೆ ಇರಲಿ, ಹೊರಗಡೆ, ತಾಂಡಾಗಳಲ್ಲಿ ಸಲ್ಲದು. ಮೋಸ ಮಾಡಿ ಕ್ರಿಸ್‌ಮಸ್ ಹಬ್ಬದಲ್ಲಿ ಕ್ರಿಸ್ತಮಿಷನರಿಗಳಿಂದ ಪ್ರಯತ್ನ ನಡೆಸಿದ್ದಾರೆ. ತಾಂಡದಲ್ಲಿ ಒಳಗಡೆ ಪ್ರವೇಶ ಮಾಡಬೇಕಾದರೆ ತಾಂಡದ ದೈವಸ್ಥರ ಒಪ್ಪಿಗೆಯನ್ನ ಕೇಳಿ ತಾಂಡ ಒಳಗೆ ಪ್ರವೇಶ ಮಾಡಬೇಕು. ಇಲ್ಲವಾದರೆ ಅಂಥವರ ವಿರುದ್ಧ ಸೂಕ್ತ ಕಾನೂನು ಹೋರಾಟ ಮಾಡಲಾಗುತ್ತದೆ ಎಂದು ತಂಡಾಗಳ ದೈವಸ್ಥರು ಎಚ್ಚರಿಕೆ ನೀಡಿದ್ದಾರೆ.
ಲಂಬಾಣಿ ತಾಂಡಾಗಳಲ್ಲಿ ಕ್ರೈಸ್ತರು ಪ್ರವೇಶಿಸಿ ಮತಾಂತರ ಯತ್ನದಲ್ಲಿ ತೊಡಗಿದ್ದಾರೆ. ಈ ಪ್ರಯತ್ನ ನಿಲ್ಲಿಸದಿದ್ದರೆ ತಕ್ಕಶಾಸ್ತಿ ಅನುಭವಿಸಬೇಕಾಗುತ್ತದೆ. ತಾಂಡಾಗಳಲ್ಲಿ ತಾಂಡಾಗಳಲ್ಲಿ ಬಡತನ, ಅನಕ್ಷರತೆ ನೆಪವಾಗಿ ಲಂಬಾಣಿಗರಿಗೆ ಮತಾಂತರ ಮಾಡುವ ಮೋಸ ಯೇಸು ಒಪ್ಪುವುದಿಲ್ಲ. ಲಂಭಾಣಿಗರು ಮತಾಂತರ ತಡೆಗೆ ಎಲ್ಲ ತಾಂಡಾಗಳಲ್ಲಿ ದಿಪೋತ್ಸವ ಹಮ್ಮಿಕೊಳ್ಳಲಾಗಿದೆ. ಎಲ್.ಹನುಮಾನಾಯ್ಕ, ರಾಷ್ಟ್ರೀಯ ಗೋರ್ ಬಂಜಾರ ಜಿಲ್ಲಾಧ್ಯಕ್ಷ, ವಿಜಯನಗರ