ಹೊಸಪೇಟೆ ರೋಟರಿ ವೃತ್ತದಲ್ಲಿ 150 ಅಡಿ ಧ್ವಜಸ್ತಂಭ ನಿರ್ಮಾಣಕ್ಕೆ ಚಾಲನೆ, ಆ.15ಕ್ಕೆ ಉದ್ಘಾಟನೆ

18072020 Hospet 150 foot Flagstaff Construction
Published on

ಹೊಸಪೇಟೆ: ನಗರ ಹೃದಯ ಭಾಗದ ರೋಟರಿ ವೃತ್ತದಲ್ಲಿ 150 ಅಡಿ ಎತ್ತರದ ಧ್ವಜ ಸ್ತಂಭ ಸ್ಥಾಪನೆಗೆ ಹುಡಾ ಅಧ್ಯಕ್ಷ ಅಶೋಕ ಜೀರೆ ಶನಿವಾರ ಭೂಮಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಆಕಾಂಕ್ಷೆಯಂತೆ ಸಿಎಸ್‌ಆರ್‌ನ 50 ಲಕ್ಷ ರೂ.ವೆಚ್ಚದಲ್ಲಿ ಬೃಹತ್ ಧ್ವಜ ಸ್ತಂಭ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಆ.15ರಂದು ಉದ್ಘಾಟನೆ ನೆರವೇರಲಿದೆ. ನಗರದ ರೋಟರಿ ವೃತ್ತದ ಕಾಂಕ್ರಿಟ್ ಬೆಡ್ ಸ್ಥಳದಲ್ಲೇ ಸ್ತಂಭ ನಿರ್ಮಿಸಲಾಗುವುದು ಎಂದರು.

ಮುಖಂಡರಾದ ಸಂದೀಪ್ ಸಿಂಗ್, ಜೀವರತ್ನಂ, ರಮೇಶ್ ಬಂಡಿ, ಪ್ರಕಾಶ್ ಗುಡಿ, ಬಷೀರ್, ಸೋಮಶೇಖರ್, ವೆಂಕಟೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net