

ಹೊಸಪೇಟೆ: ಸಂವಿಧಾನದ ಆಶಯಗಳು ಪಾಲನೆ ಆಗುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಹೊಣೆಗಾರಿಕೆ ಎಂದು ಉಪವಿಭಾಗಿಯಾಧಿಕಾರಿ ಪಿ.ವಿವೇಕಾನಂದ ಹೇಳಿದರು.
ಸಖಿಟ್ರಸ್ಟ್ನಿಂದ ನಗರದ ಒಳಂಗಣ ಕ್ರೀಡಾಂಗಣದ ಸಭಾಂಗಣದಲ್ಲಿ ಮಂಗಳವಾರ ನಡೆದ ಯುವಜನರ ನಡೆ ಸಂವಿಧಾನದೆಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ‍್ಯ, ಸಮಾನತೆ, ಬಾತೃತ್ವದ ಸಂವಿಧಾನದ ಕೇಂದ್ರ ಚಿಂತನೆಯಾಗಿದ್ದು ಇದನ್ನಾಧರಿಸಿ ಸಂವಿಧಾನ ರಚನೆಯಾಗಿದೆ. ಎಲ್ಲರಿಗೂ ಮತದಾನದ ಹಕ್ಕು ನೀಡುವುದರ ಮೂಲಕ ಅಂಬೇಡ್ಕರ್ ಸಂವಿಧಾನ ಬದ್ಧ ರಾಜಕೀಯ ಸಮಾನತೆ ನೀಡಿದ್ದಾರೆ. ಯುವಜನರು ಅಂಬೇಡ್ಕರ್ ಅವರ ತತ್ವವನ್ನು ಅಳವಡಿಸಿಕೊಂಡರೆ ಬದುಕು ಅಸನಾಗುತ್ತೆದೆ. ಶಿಕ್ಷಣ ಪಡೆದರೆ ಜೀವನ ಸುಂದರವಾಗಿರುತ್ತದೆ ಎಂದರು.
ಜಾನಪದ ವಿವಿಯ ಸಿಂಡಿಕೇಟ್ ಸದಸ್ಯೆ ಸಾಹನಾ ಪಿಂಜಾರ್, ಅಜೀಂ ಪ್ರಮಾಜೀ ವಿವಿಯ ಪ್ರಾದ್ಯಾಪಕ ಪ್ರೇಮ್ ದಾಸ್ ಪಿಂಟೋ, ಸಖಿಟ್ರಸ್ಟ ನಿರ್ದೇಶಕಿ ಡಾ.ಎಂ.ಭಾಗ್ಯಲಕ್ಷಿö್ಮÃ, ಪ್ರಮುಖರಾದ ನಸ್ರೀನ್ ಮೀಠಾಯಿ, ಅವಿನಾಶ್ ಇತರರಿದ್ದರು.