ರಾಜಕೀಯ ಲಾಭಕ್ಕಾಗಿ ಧರ್ಮಸ್ಥಳ ಪಾದಯಾತ್ರೆ ನಾಟಕ

Oplus_131072
Oplus_131072
Published on

ಹೊಸಪೇಟೆ: ಕಳೆದ ಲೋಕಸಭೆ ಚುನಾವಣೆಯಲ್ಲಿ ಜರುಗಿದ ಮತಗಳ್ಳತನ ಪ್ರಕರಣವನ್ನು ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ಬಯಲಿಗೆಳೆದಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ ಸೊರಕೆ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರ ಸೇರಿದಂತೆ ಇತರೆ ರಾಜ್ಯಗಳಲ್ಲಿ ಮತಗಳ್ಳತನ ಕುರಿತು ಜನ ಜಾಗೃತಿ ಮೂಡಿಸುವ ಕೆಲಸವನ್ನು ರಾಹುಲ್ ಗಾಂಧಿ ಮಾಡುತ್ತಿದ್ದಾರೆ. ಬಿಹಾರದ ಒಂದೇ ಮನೆ ನಂ. ನಲ್ಲಿ 947 ಮತಗಳು ಇರುವುದು ಪತ್ತೆಯಾಗಿದೆ. ಕ್ರಮ ಕೈಗೊಳ್ಳಬೇಕಾದ ಚುನಾವಣಾ ಆಯೋಗ, ಮತಗಳ್ಳತನ ಬಯಲಿಗೆಳೆದಿರುವವರಿಗೆ ಬೆದರಿಕೆ ಹಾಕುವ ಕೆಲಸ ಮಾಡುತ್ತಿದೆ. ಚುನಾವಣಾ ಆಯೋಗ ಏಕಪಕ್ಷೀಯವಾಗಿ ಕೆಲಸ ಮಾಡುತ್ತಿದೆ. ಮತಯಂತ್ರಗಳ ಬಗ್ಗೆ ದೇಶದಲ್ಲಿ ಹಲವಾರು ಅನುಮಾನಗಳು ಎದ್ದಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮತಪತ್ರಗಳ ಮೂಲಕ ನಡೆಸುವ ತೀಮಾನವನ್ನು ಕೈಗೊಂಡಿದೆ ಎಂದರು.

ಸೌಜನ್ಯ ಪ್ರಕರಣದ ತನಿಖೆಯನ್ನು ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಎಸ್.ಐ.ಟಿಗೆ ವಹಿಸಲಾಗಿದೆ. ಎಸ್.ಐ.ಟಿ ತನಿಖೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಡೆ, ಸೇರಿದಂತೆ ಬಿಜೆಪಿ ನಾಯಕರು ಎಲ್ಲಾ ಸ್ವಾಗತಿಸಿದರು. ಎಸ್.ಐ.ಟಿ ತನಿಖೆಯಿಂದ ಹೊರ ಬಂದಿರುವ ಮಹೇಶ್ ತಿಮ್ಮಾರೊಡಿ, ಗಿರೀಶ್ ಮಟ್ಟಣ್ಣ ನವರ್ ಬಿಜೆಪಿ ಹಾಗೂ ಸಂಘ ಪರಿವಾರ ಮೂಲದವರು. ಈಗ ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡುತ್ತಿರುವವರು ಬಿಜೆಪಿ ಶಾಸಕರು. ಸೌಜನ್ಯ ಸಾವು ಸಂಭವಿಸಿದಾಗ ಮುಖ್ಯಮಂತ್ರಿ ಆಗಿದ್ದವರು. ಬಿಜೆಪಿ ಸರ್ಕಾರದಲ್ಲಿ ಸೌಜನ್ಯಕ್ಕಾದರೂ ಸೌಜನ್ಯಳ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳುವ ಕೆಲಸ ಮಾಡಲಿಲ್ಲ. ಪ್ರಕರಣದ ತನಿಖೆಯನ್ನು ಮಾಡಿಸಲಿಲ್ಲ. ಈಗ ರಾಜಕೀಯವಾಗಿ ಎನಾದರೂ ಲಾಭ ದೊರೆಯಬಹುದು ಎಂಬ ದೃಷ್ಟಿಯಿಂದ ಧರ್ಮಸ್ಥಳ ಪಾದಯಾತ್ರೆ ನಾಟಕ ಮಾಡುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net