

ಹೊಸಪೇಟೆ: ಎಚ್‌ಬಿಹಳ್ಳಿ ದೈಹಿಕ ಶಿಕ್ಷಕ ಎಂ.ಪಿ.ಎA.ಮAಜುನಾಥ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದಿಂದ ಸೋಮವಾರ ಡಿಡಿಪಿಐ ಕಚೇರಿಯ ಸ್ಥಾನಿಕಾಧಿಕಾರಿ ಬಸವರಾಜ್ ಗೆ ಸಲ್ಲಿಸಲಾಯಿತು.
ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ಇತ್ತೀಚಿಗೆ ನಡೆದಿದ್ದು, ಹಗರಿಬೊಮ್ಮನಹಳ್ಳಿಯ ಗಂಗಾವತಿ ಭೀಮಣ್ಣನವರ ಸರ್ಕಾರಿ ಪ.ಪೂ.ಕಾಲೇಜ ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಕ ಎಂ.ಪಿ.ಎA.ಮAಜುನಾಥ ಮಾಧ್ಯಮಗಳ ಮುಂದೆ ಸರ್ಕಾರದ ಹಣ ಆಮಿಷಗಳ ಮಧ್ಯೆ ಮತ್ತು ಒತ್ತಡಗಳ ಮಧ್ಯೆ ಷಡಕ್ಷರಿ ಗೆದ್ದಿದ್ದಾರೆ ಎಂದು ಆಧಾರ ರಹಿತ ಆರೋಪ ಮಾಡಿದ್ದಾರೆ. ಯಾರು ಯಾರಿಗೆ ಹಣದ ಆಮಿಷ ಅಮಿಷವನ್ನ ಸರ್ಕಾರ ಒಡ್ಡಿದೆ ಎಂಬುದನ್ನು ಶಿಕ್ಷಕ ಮಂಜುನಾಥ ಸಾಬೀತಪಡಿಸಬೇಕು. ಒಬ್ಬ ಸರ್ಕಾರಿ ನೌಕರನಾಗಿ ರಾಜಕಾರಣಿಯಂತೆ ವರ್ತಿಸುವುದು ಸರಿಯಲ್ಲ. ಸರ್ಕಾರಿ ಸೇವಾ ನಿಯಮಗಳು ಹಾಗೂ ಕರ್ನಾಟಕ ನಾಗರಿಕ ಸೇವಾ ನಿಯಮಗಳಿಗೆ ತದ್ವಿರುದ್ಧವಾಗಿ ವರ್ತಿಸಿ ಸೇವಾ ನಿಯಮ ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗ ಜಿಲ್ಲಾಧ್ಯಕ್ಷ ಸೋಮಶೇಖರ್ ಬಣ್ಣದಮನೆ, ಪ್ರಮುಖರಾದ ರವಿಕುಮಾರ್, ಸೂರ್ಯನಾರಾಯಣ, ಶಿವಕುಮಾರ್, ಮಹಾಂತೇಶ್ ಇತರರಿದ್ದರು.