

ಹೊಸಪೇಟೆ: ಕೇಂದ್ರ ಸರ್ಕಾರ ಮಧ್ಯಮ, ಬಡವರ ಅನುಕೂಲಕ್ಕಾಗಿ 32 ಅಗತ್ತ ವಸ್ತುಗಳ ಜಿಎಸ್‌ಟಿಯನ್ನು ಶೇ.5ಕ್ಕೆ ಇಳಿಸಿದ್ದಾರೆ. ದೇಶವೇ ಹೋಗಳುತ್ತಿದೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಮಾತ್ರ ಬಾಯಿ ಬಡಿದು ಕೊಳ್ಳುತ್ತದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ನಗರದ ಮೇನ್‌ಬಜಾರ್‌ನಲ್ಲಿ ಪ್ರತಿಷ್ಠಪಿಸಿರುವ ಹಿಂದು ಮಹಾ ಗಣಪತಿ ದರ್ಶನ ಪಡೆದು, ಸುದ್ದಿಗಾರರೊಂದಿಗೆ ಮಾತನಾಡಿದರು. ಒಲ್ಲದ ಗಂಡನಿಗೆ ಮಸರಲ್ಲಿ ಕಲ್ಲು ಎಂಬ ಗಾದೆಯಂತೆ ಬಿಜೆಪಿ ಏನೇ ಮಾಡಿದರು, ವಿರೋಧಿಸುವ ಕಾಯಿಲೆ ಕಾಂಗ್ರೆಸ್‌ಗೆ ಅಂಟಿಕೊAಡಿರ ಬಹುದು ಎಂದು ವ್ಯಂಗ್ಯವಾಡಿದರು.
ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಬದಲಿಗೆ ರಾಜ್ಯ ಸರ್ಕಾರ ಏರಿಕೆ ಮಾಡದೇ ಇರೋ ತೆರಿಗೆ ಇಲ್ಲ ಎಂಬುದು ಹೊಸ ಗಾದೆಯಾಗಿದೆ. ಔರಂಗಜೇಬನ ಜಜಿಯಾ ತೆರಿಗೆಯಂತೆ ಸಿದ್ದರಾಮಯ್ಯ ಭ್ರೂಣಕ್ಕೂ ತೆರಿಗೆ ಹಾಕುತ್ತಾರೆ. ಅಪ್ಪಿತಪ್ಪಿ ಕಾಂಗ್ರೆಸ್ ಕಿವಿಗೆ ಈ ಮಾತು ಬಿಳದಿರಲಿ. ಪಂಚ ಗ್ಯಾರಂಟಿ ನೆಪದಲ್ಲಿ ಪಂಚೇAದ್ರಿಯಗಳಲ್ಲಿ ರಕ್ತ ಹೀರುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
2023ರ ಜುಲೈ ತಿಂಗಳಲ್ಲಿ ಧರ್ಮಸ್ಥಳ ವಿರುದ್ಧ ಧ್ವನಿ ಎಂಬ ಸಾಮಾಜಿಕ ಜಾಲತಾಣ ಹುಟ್ಟು ಹಾಕಿ, ಸುಳ್ಳು ಸುದ್ದಿ ಬಿತ್ತರಿಸಲು ಷಡ್ಯಾಂತರ ಮಾಡಲಾಗಿದೆ ಎಂದು ಅಲ್ಲಿನ ಗುಪ್ತಚರ ಇಲಾಖೆಯಿಂದ ರಾಜ್ಯ ಸರ್ಕಾರಕ್ಕೆ ವರದಿ ಮಾಡಿದೆ. ಆದರೂ ರಾಜ್ಯ ಸರ್ಕಾರ ತಡೆಯುವ ಪ್ರಯತ್ನ ಕೂಡ ಮಾಡಲಿಲ್ಲ. ಸಿಎಂಗೆ ಪ್ರಶ್ನೆ ಮಾಡಿದರೆ, ಸೌಜರ್ನ್ಯ ಪರವೋ, ವೀರೇಂದ್ರ ಹೆಗ್ಗಡೆ ಪರವೋ ಎಂದು ಅಸಂಬದ್ಧ ಪ್ರಶ್ನೆ ಮಾಡುತ್ತಾರೆ. ಆದರೆ, ತಾನೊಂದು ಬಗೆದರೆ ದೈವವೊಂದಿ ಬಗೆದಿತ್ತು ಎಂಬ ಗಾದೆಯಿದೆ. ಅದರಂತೆ ಸರ್ಕಾರದ ವ್ಯವಸ್ಥಿತವಾಗಿ ರೂಪಿಸಿದ ಕೃತ್ಯಕ್ಕೆ ದೇವ ಧರ್ಮದ ಪರವಾಗಿ ನಿಂತಿದೆ. ಉನ್ನತ ತನಿಖೆ ನಡೆಸಲು ಎನ್‌ಐಎಗೆ ವಹಿಸಬೇಕು. ಇವರ ಮೇಲೆ ಅನುಮಾನ ಇದ್ದರೆ, ಹಾಲಿ ಹೈಕೋರ್ಟ್ ಅಥವ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಎಸ್‌ಐಟಿ ತನಿಖೆ ನಡೆಯಲಿ ಎಂದು ಒತ್ತಾಯಿಸಿದರು.
ಪ್ರಮುಖರಾದ ಬಂಗಾರ ಹನುಮಂತು, ಸಾಲಿಸಿದ್ದಯ್ಯಸ್ವಾಮಿ, ಕಿಚಡಿ ಕೊಟ್ರೇಶ್, ಜಗದೀಶ್ ಕಮಟಗಿ, ಶಂಕರ್ ಮೇಟಿ, ರಾಘವೇಂದ್ರ, ತಿಪ್ಪೇಶ, ರೇವಣ್ಣ ಸಿದ್ದಪ್ಪ, ಅನುರಾಧ ಇತರರಿದ್ದರು.