ಸಂಚಾರಿ ನಿಯಾಮ ಇನ್ನೂ ಕಠಿಣ

05 MANJU 04
Published on

ಹೊಸಪೇಟೆ: ಒಂದು ತಿಂಗಳಲ್ಲಿ ತರಕಾರಿ, ಹಣ್ಣಿನ ವ್ಯಾಪಾರ, ಫುಡ್ ಸೇರಿ ಪ್ರತ್ಯೇಕವಾಗಿ ವ್ಯಾಪಾರ ಮಾಡಲು ನಿಗದಿತ ಪ್ರದೇಶಗಳನ್ನು ಗುರುತಿಸಲಾಗುವುದು. ಸಮಸ್ಯೆ ಇರುವ ಕಡೆ ಸಿಬ್ಬಂದಿ ನಿಯೋಜನೆ ಬಗೆ ಹರಿಸಲಾಗುವುದು. ಪ್ರತಿಯೊಬ್ಬರು ಶಿಸ್ತಿನಿಂದ ವ್ಯಾಪಾರ ನಡೆಸಬೇಕು ಎಂದು ಎಸ್ಪಿ ಬಿ.ಎಲ್.ಶ್ರೀಹರಿಬಾಬು ಹೇಳಿದರು.

ನಗರದ ಪಟ್ಟಣ ಪೊಲೀಸ್ ಠಾಣೆ ಆವರಣದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಸಂಚಾರಿ ನಿಯಮಗಳ ಜಾಗೃತಿ ಸಭೆ ಚಾಲನೆ ನೀಡಿ ಮಾತನಾಡಿದರು.

ಈ ಜಿಲ್ಲೆ ಬಹಳ ವಿಶೇಷವಾಗಿದೆ. ಇಡೀ ಪ್ರಪಂಚದ ನಾನಾ ದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಹಂಪಿಗೆ ಬರುವವರು ನಗರಕ್ಕೆ ಬಂದೇ ಬರುತ್ತಾರೆ. ಇಂತಹ ಮಹಾನ್ ಸಾಮ್ರಾಜ್ಯದ ಜಾಗದಲ್ಲಿ ಜನ ಈಗ ಹೇಗಿದ್ದಾರೆಂದು ನೋಡುವ ಕುತೂಹಲ ಇರುತ್ತೆ. ಆದರೆ, ಇಲ್ಲಿ ಹೇಗೆ ಬೇಕೊ ಹಾಗೆ ರಸ್ತೆಗಳಲ್ಲಿ ಅಂಗಡಿ ಹಾಕಿ ಸಂಚಾರ ಸಮಸ್ಯೆ ಮಾಡಿದರೆ ನಮ್ಮ ಊರಿನ ಬಗ್ಗೆ ಅವರಿಗೆ ತಪ್ಪು ಅಭಿಪ್ರಾಯ ಹೋಗುತ್ತದೆ. ಇದಕ್ಕೆ ಯಾರೂ ಆಸ್ಪದ ನೀಡದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಎಲ್ಲರು ತಮ್ಮ ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದೀರಿ. ನಿಯಮ ಪಾಲಿಸದಿದ್ದರೆ ಅದಕ್ಕೆ ಅಧಿಕಾರಿಗಳಷ್ಟೇ ಜವಾಬ್ದಾರಿ ಅಲ್ಲ. ಮಾಲಿಕರೂ ಜವಾಬ್ದಾರಿಯಾಗುತ್ತಾರೆ. ಇಲ್ಲಿ ಜಾಗ ಕಡಿಮೆ ಇದೆ. ಇರುವ ಸೀಮಿತ ಪ್ರದೇಶದಲ್ಲಿ ವ್ಯವಸ್ಥಿತವಾಗಿ ಇರಬೇಕು. ಮುಂದಿನ ದಿನಗಳಲ್ಲಿ ನಿಯಮಗಳನ್ನು ಕಠಿಣವಾಗಿ ಜಾರಿಗೊಳಿಸಲಾಗುವುದು ಎಂದರು.

ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳು ಶಿಸ್ತುಬದ್ದವಾಗಿ ವ್ಯಾಪಾರ ಮಾಡಲು ನಗರಸಭೆ ಸಹಕಾರ ನೀಡಲಿದೆ. ಸಂಚಾರದ ಸಮಸ್ಯೆಯಾಗದಂತೆ ಬೀದಿ ಬದಿ ವ್ಯಾಪಾರಿಗಳು ಕೈ ಜೋಡಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net