

ಹೊಸಪೇಟೆ: ಕುರುಬ ಸಮುದಾಯಕ್ಕೆ ಎಸ್ಟಿಗೆ ಸೇರಿಸಲು ಕುತಂತ್ರ ನಯುತ್ತಿದೆ ಎಂದು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸಂಜೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅಧ್ಯಕ್ಷತೆಯಲ್ಲಿ ನಡೆಯತ್ತಿದ್ದ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯನ್ನು ವಾಲ್ಮೀಕಿ ಸಮುದಾಯ ಬಹಿಷ್ಕರಿಸಿದರು.
ನಾವು ಹೋರಾಟ ಮಾಡಿ ವಾಲ್ಮೀಕಿ ಜಯಂತಿಯ ರಜೆ ಪಡೆದವರು. ನಮಗೆ ಈಗ ಸದ್ಯ ಅನ್ಯಾಯ ಮಾಡಲು ರಾಜ್ಯ ಸರ್ಕಾರ ಹೊರಟಿದೆ. ಕುರುಬ ಸಮುದಾಯ ಸೇರಿದಂತೆ ನಾನಾ ಸಮುದಾಯಗಳನ್ನು ಎಸ್ಟಿಗೆ ಸೇರಿಸಲು ಹೊರಟಿದ್ದಾರೆ. ಮತ್ತೆ ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ. ಇದರ ಬಗ್ಗೆಯೂ ರಾಜನಗಳ್ಳಿ ಗುರುಪೀಠದಲ್ಲಿ ನಡೆದ ಸಭೆಯಲ್ಲಿ ಗಲಾಟೆ ಆಗಿದೆ. ನಾವು ಸಾಮಾನ್ಯ ಸಭೆ ಕರೆದಿದ್ದೇವೆ, ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಸಭೆ ಬಹಿಷ್ಕರಿಸಿ ಸಭೆಯಿಂದ ಹೊರ ನಡೆದರು.
ಅಹಿಂದ ನಾಯಕರಲ್ಲ ಬರೀ ಕುರುಬ ಸಮುದಾಯದ ನಾಯಕ. ವಾಲ್ಮೀಕಿ ಸಮುದಾಯವನ್ನು ತುಳಿಯಬೇಕು ಎಂಬುದೇ ಸಿಎಂ ಸಿದ್ದರಾಮಯ್ಯ ಅವರ ಉದ್ದೇಶವಾಗಿದೆ. ಎಸ್ಟಿ ಮೀಸಲಾತಿಯಿಂದ 15 ಜನ ಶಾಸಕರು, ಮೂವರು ಸಂಸದರು, ಮೂವರು ಎಂಎಲ್ಸಿಗಳು ಆಯ್ಕೆಯಾಗಿದ್ದಾರೆ. ಇದನ್ನು ಸಹಿಸದೇ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಲು ಸಿದ್ದರಾಮಯ್ಯ ಹೊರಟ್ಟಿದ್ದಾರೆ. ಮುಂದೆ ನಡೆಯುವ ಈ ಹೋರಾಟದಿಂದ ಸರ್ಕಾರ ಪಥನವಾಗಲಿದೆ ಎಂದು ಎಚ್ಚರಿಸಿದರು.
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ಕಳೆದ ಬಾರಿಯಂತೆ ಈ ಬಾರಿ ಕೂಡ ವಾಲ್ಮೀಕಿ ಜಯಂತಿಗೆ ಸಿದ್ದತೆ ಮಾಡಿಕೊಳ್ಳಿ. ವಾಲ್ಮೀಕಿ ಸಮುದಾಯ ಅವರ ಸಭೆ ನಂತರ ಆಚರಣೆಗೆ ತಿಳಿಸಲಿದ್ದಾರೆ. ಇಲ್ಲವೇಂದರೆ ಸಾಂಕೇತಿಕವಾಗಿ ನಡೆಸಲು ಸಿದ್ದತೆ ನಡೆಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಾಲ್ಮೀಕಿ ಸಮುದಾಯದ ತಾಲೂಕು ಅಧ್ಯಕ್ಷ ಗೊಸಲ ಬರಮಪ್ಪ, ಪ್ರದಾನ ಕಾರ್ಯದರ್ಶೀ ದೇವರಮನಿ ಶ್ರೀನಿವಾಸ್, ಕಿಚಡಿ ಶ್ರೀನಿವಾಸ್, ದುರುಗಪ್ಪ ಪುಜಾರ್, ಗುಜ್ಜಲ ಚಂದ್ರಶೇಖರ್, ಎಸ್.ಎಸ್.ಚಂದ್ರಶೇಖರ್, ಕಿಶೋರ್ ಕುಮಾರ್ ಇತರರಿದ್ದರು.