ಪ್ರಪಂಚಕ್ಕೆ ಒಳಿತಾಗುವ ತಂತ್ರಜ್ಞಾನವು ಆವಶ್ಯಕ

23 MANJU 05
Published on

ಹೊಸಪೇಟೆ : ಅತಿಯಾದ ತಂತ್ರಜ್ಞಾನದಿAದ ಪ್ರಪಂಚವು ಕೆಡಬಾರದು. ಆ ತಂತ್ರಜ್ಞಾನವು ಜಗತ್ತನ್ನು ಉಳಿಸುವ ನಿಟ್ಟಿನಲ್ಲಿ ಬಳಕೆಯಾದರೆ ಅದೇ ಇಂಜಿನಿಯರ್‌ಗಳು ಕಂಡುಕೊಳ್ಳುವ ಯಶಸ್ಸು ಎಂದು ಇಲ್ಲಿನ ಶ್ರೀ ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ನಗರದ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ ಭಾನುವಾರ ಈ ಸಾಲಿನ ಮೊದಲ ವರ್ಷದ ತರಗತಿಗಳ ಪ್ರಾರಂಭೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ದುಂಬಿಯು ಹೇಗೆ ಹೂವಿಗೆ ಹಾನಿಯಾಗದಂತೆ ಮಕರಂದವನ್ನು ಹೀರಿ ಅನುಭವವನ್ನು ಪಡೆಯುತ್ತದೆಯೋ ಹಾಗೆಯೇ ಮಾನವನು ಪ್ರಪಂಚವನ್ನು ಅನುಭವಿಸಬೇಕು. ಹೊಸ ತಂತ್ರಜ್ಞಾನದ ಆವಿಷ್ಕಾರಗಳು ಪ್ರಪಂಚದ ನೆಲ ಜಲ ಹಾಗೂ ಪರಿಸರಕ್ಕೆ ಯಾವುದೇ ಹಾನಿ ಉಂಟು ಮಾಡದೆ ಜಗತ್ತನ್ನು ಉಳಿಸುವ ಮಾರ್ಗಡೆದೆಗೆ ಇಂಜಿನಿಯರ್‌ಗಳು ಕೈ ಜೋಡಿಸಿದರೆ ಮಾನವನ ಸಂಕುಲವನ್ನು ಶ್ರೀಮಂತಗೊಳಿಸಬಹುದು ಎಂದು ಆಶೀರ್ವಾಚನ ನೀಡಿದರು.

ಖಾಸಗಿ ಸಂಶ್ಥೆಯ ಮುಖ್ಯಸ್ಥ ಶುಭಾಂಕ್ ಪಾಲ್ ಮಾತನಾಡಿ ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆ, ಹಾಗೂ ಕೈಗಾರಿಕಾ ವಲಯಗಳು ಸಹಯೋಗದಲ್ಲಿ ಒಂದೇ ಸರಳರೇಖೆಯಲ್ಲಿ ಸಂಶೋಧನೆಯನ್ನು ಕೈಗೊಂಡರೆ ಎಲ್ಲ ಸವಾಲುಗಳನ್ನು ಮೀರಿ ಆವಿಷ್ಕರಗಳನ್ನು ಸಾಧಿಸಬಹುದು ಎಂದರು.

ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರು ಬಸವರಾಜ್ ಮಾತನಾಡಿ, ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಶಿಕ್ಷಣ ದೊರಕಲು ವೀರಶೈವ ವಿದ್ಯಾವರ್ಧಕ ಸಂಘ ಸ್ವತಂತ್ರ ಪೂರ್ವದಿಂದಲೂ ಗ್ರಾಮೀಣ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ತಾಂತ್ರಿಕ ಶಿಕ್ಷಣ ಒದಿಗಿಸುತ್ತ ಬಂದಿದೆ ಎಂದರು.

ಪಿಡಿಐಟಿಯ ಆಡಳಿತ ಮಂಡಳಿ ಅಧ್ಯಕ್ಷ ಕರಿಬಸವರಾಜ ಬಾದಾಮಿ, ಪ್ರಾಂಶುಪಾಲ ಡಾ.ಯು.ಎಂ.ರೋಹಿತ್, ಉಪ ಪ್ರಾಂಶುಪಾಲ ಡಾ.ಪಾರ್ವತಿ ಕಡ್ಲಿ, ಪ್ರಾಧ್ಯಾಪಕರಾದ ಡಾ.ಶರಣ ಬಸಮ್ಮ, ಡಾ.ನಾಗರಾಜ್, ಡಾ.ವಿಶ್ವನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net