ಕಾಲೇಜು ಸುತ್ತೋಲೆಯಲ್ಲಿ ಎಡವಟ್ಟು

26 MANJU 03
Published on
ಹೊಸಪೇಟೆ: ಇಲ್ಲಿನ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪದವಿ ಕಾಲೇಜಿನ ಶುಲ್ಕ ಪಾವತಿಸುವ ದಿನಾಂಕ ಸುತ್ತೋಲೆಯಲ್ಲಿ ಎಡವಟ್ಟು ಮಾಡಿಕೊಂಡಿತು. ವಿಜಯವಾಣಿ ಕರೆಗೆ ಆಡಳಿತ ಮಂಡಳಿ ಎತ್ತೇತ್ತುಕೊಂಡು ಬದಲಿಸಿದೆ.

ದ್ವಿತೀಯ ಮತ್ತು ಅಂತಿಮ ವರ್ಷದ ಪದವಿ ಪ್ರವೇಶಾತಿ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು ಯುಯುಸಿಎಂಎಸ್ ನಲ್ಲಿ ಆನ್-ಲೈನ್‌ನಲ್ಲಿ ಅ.26 ರಿಂದ ಪ್ರವೇಶಾತಿ ಶುಲ್ಕ ಪಾವತಿಸಬಹುದು ಎಂದು ಸುತ್ತೋಲೆ ಹೊರಡಿಸಿದೆ. ಆದರೆ ಆರಂಭ ಅ.26ರ ಇದ್ದರೆ, ದಂಡ ರಹಿತ ಪ್ರವೇಶಾತಿಗೆ ಕೊನೆಯ ಅ.11 ಎಂದು ನಮೂದಿಸಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಶುಲ್ಕ ಪಾವತಿಯೋ ಆರಂಭವೋ ಅಥವ ಮುಗಿದಿದೆಯೋ ಎಂದು ಗೊಂದಲ ಮೂಡಿತು. ಇದು ಸಾಮಾಜಿಕ ಜಾಲತಾಣದಲ್ಲಿ ಕೂಡ ಭಾರಿ ವೈರಲ್ ಆಗಿದೆ.

ಕಾಲೇಜಿನ ಪ್ರಾಂಶುಪಾಲ ನಾರಾಯಣ್ ಹೆಬಸೂರು ಅವರಿಗೆ ಮಾತನಾಡಿಸಿದರೆ, ನಾನು ಬೇರೆ ಕೆಲಸದ ಮೇಲೆ ಹೋಗಿರುವೆ, ಪ್ರಭಾರ ಪಾಂಶುಪಾಲ ಡಾ.ಮಲ್ಲಿಕಾರ್ಜುನ ಕೊಪ್ಪಿ ಕಾಲೇಜಿನ ಸುತ್ತೋಲೆ ಹೊರಡಿಸಿದ್ದಾರೆ ಎಂದರು. ವಿಜಯವಾಣಿ ಕರೆಗೆ ಎಚ್ಚೇತ್ತುಕೊಂಡ ಕಾಲೇಜಿನ ಪ್ರಭಾರ ಪ್ರಾಂಶುಪಾಲ ನ.11 ರಂದು ದಿನಾಂಕ ಬದಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net