ರೈತರಿಗೆ ನೆಮ್ಮದಿಯ ಜೀವನ ಕರುಣಿಸಿ

09 MANJU 04
Published on

ಹೊಸಪೇಟೆ: ರೈತರು ಸಾಗು ಮಾಡುವ ಜಮೀನುಗಳಿಗೆ ಹಕ್ಕು ಪತ್ರ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದಿAದ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿಯ, ನಂದಿಬAಡಿ ಕಂದಾಯ ಗ್ರಾಮದ ಸರ್ಕಾರಿ ಜಮೀನು, ಗರಗ ನಾಗಲಾಪುರ ಗ್ರಾಮದ ಫಾರೆಸ್ಟ್ ಜಮೀನು ಹಾಗೂ ಇತ್ತೀಚಿನ ದಿನಗಳಲ್ಲಿ ಡಣಾಯಕನ ಕೆರೆ ಕಂದಾಯ ಗ್ರಾಮದಲ್ಲಿ 50ಕ್ಕೂ ಅಧಿಕ ರೈತರು ಕಳೆದ 70 ವರ್ಷಗಳಿಂದ ಸಾಗುವಳಿ ಮಾಡಿತ್ತಿದ್ದಾರೆ. ಈ ಹಿಂದೆ ಕೈ ಬರಹ ಪಹಣಿ ಮತ್ತು ಕಂಪ್ಯೂಟರ್ ಪಹಣಿಗಳಲ್ಲಿ ಹೆಸರು ಇದೆ. ಮತ್ತು ಕೆಲವು ರೈತರು ತೆರಿಗೆ ಕಟ್ಟಿದ ರಶೀದಿ ಕೂಡ ಇದೆ. ಆದರೆ, ಕಂದಾಯ ಇಲಾಖೆಯಿಂದ ನೋಟಿಸ್ ನೀಡಲಾಗುತ್ತಿದೆ. ಸರ್ಕಾರ ರೈತರ ರಕ್ಷಣೆ ಇದೆಯೋ ಅಥವಾ ಕಾರ್ಪೊರೇಟರ್ ಕಂಪನಿಗಳ ಪರವಾಗಿ ಇದೆಯೋ, ಗೊತ್ತಾಗುತ್ತಿಲ್ಲ. ತಹಸೀಲ್ದಾರ್ ಮುಖಾಂತರ ರೈತರನ್ನು ಒಕ್ಕಲಿಬ್ಬಿಸಲು ನೋಟಿಸ್ ಜಾರಿ ಮಾಡಲಾಗಿದೆ. ರೈತರಿಗೆ ನೆಮ್ಮದಿಯ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಸರ್ಕಾರದ ಆದೇಶ ಬರುವವರೆಗೂ ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಬಾರದು. ಜಿಲ್ಲಾಡಳಿತ ಮದ್ದೆ ಪ್ರವೇಶ ಮಾಡಿ ಕೂಡಲೇ ಸಮಸ್ಯೆ ಸರಿಪಡಿಸಬೇಕು. ಅಭಿವೃದ್ಧಿಯ ಹೆಸರಿನಲ್ಲಿ ರೈತರ ಕೈಯಿಂದ ಭೂಮಿ ಕಸಿದುಕೊಂಡು ಸರ್ಕಾರ ಏನು ಅಭಿವೃದ್ಧಿ ಮಾಡಿದೆ. ಶ್ವೇತಾ ಪತ್ರ ಹೊರಡಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸಲಾಗತ್ತದೆ ಎಂದು ಎಚ್ಚರಿಸಿದರು.

ರಾಜ್ಯ ಕಾರ್ಯದರ್ಶಿ ಬಿ.ಗೋಣಿ ಬಸಪ್ಪ, ಪ್ರಮುಖರಾದ ಜಿ.ಮೆಹಬೂಬ್‌ಸಾಬ್, ರವಿಕುಮಾರ್ ತಂಬ್ರಹಳ್ಳಿ, ಗಂಟೆ ಸೋಮಶೇಖರ, ರಾಜಭಕ್ಷಿ, ಅಮಿಕ್‌ಸಾಬ್ ಸರ್ದಾರ್, ಎಚ್.ಲಕ್ಷ್ಮಿ, ಎನ್.ಸೋಮಕ್ಕ, ಎನ್.ಬಸಮ್ಮ, ಕೆ.ಮಂಜುಳಾ, ಫಕ್ಕುರ್‌ಸಾಬ್, ಅಂಗಡಿ ಹುಲಗಪ್ಪ, ತಳವಾರ ಹನುಮಂತಪ್ಪ, ಮಂಜುನಾಥ, ಡಿ.ಹುಲುಗಪ್ಪ, ಬಿ.ದುರ್ಗಪ್ಪ,, ದೊಡ್ಡ ಮಾರೆಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net