ಹೊಸಪೇಟೆ: ತಂದೆ, ತಾಯಿ ಮತ್ತು ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕಾರ ಮತ್ತು ಸಂಸ್ಕೃತಿಯುನ್ನು ಕಲಿಸಿದರೆ ಯಾವುದೇ ವೃದ್ಧಾಶ್ರಮದ ಅವಶ್ಯಕತೆಯಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಇತರೆ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಚರ್ಚ್ ಭವನದಲ್ಲಿ ಮಂಗಳವಾರ ಹಮ್ಮಿಕೊಂಡ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಇತ್ತಿಚಿನ ದಿನಗಳ ಹಿರಿಯರಿಗೆ ಮನೆಗಳಲ್ಲಿ ಅಗೌರವ ತೋರುವುದು ಕಂಡುಬರುತ್ತಿದೆ. ಹಿರಿಯರು ತಮ್ಮದೇ ಆದ ರೀತಿಯಲ್ಲಿ ಸಾಧನೆ ಮಾಡಿರುತ್ತಾರೆ. ಅವರಿಗೆ ಗೌರಸಲ್ಲಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಸಮಾಜದಲ್ಲಿ ಯಾವ ಕುಟುಂಬಗಳಲ್ಲಿ ಹಿರಿಯ ನಾಗರಿಕರಿಗೆ ಗೌರವ ನೀಡುವುದಿಲ್ಲಯೋ ಅಂತಹ ಕುಟುಂಬಗಳು ಸಂತೋಷ, ನೆಮ್ಮದಿಯಿಂದಿರಲು ಸಾದ್ಯವಿಲ್ಲ. ಪೋಷಕರು ಮಕ್ಕಳಿಗಾಗಿ ಆಸ್ಥಿ ಮಾಡುವುದನ್ನು ನಿಲ್ಲಿಸಿ ಮಕ್ಕಳನ್ನೇ ಆಸ್ಥಿಯನ್ನಾಗಿ ಮಾಡಿದರೆ ಅವರು ಮುಂದೆ ಪೋಷಕರನ್ನು ಮಕ್ಕಳ ರೀತಿ ನೋಡಿಕೊಳ್ಳುತ್ತಾರೆ. ಹಿರಿಯ ನಾಗರಿಕರು ಜೀವನದಲ್ಲಿ ಎಲ್ಲವನ್ನು ತಿಳಿದ ಮುಗ್ದರಂತೆ ಇರುತ್ತಾರೆ. ಅವರನ್ನು ಅಷ್ಟೇ ಮುಗ್ದತೆಯಿಂದ ನೋಡಿಕೊಳ್ಳುವುದು ಮಕ್ಕಳ ಜವಾಬ್ದಾರಿ ಎಂದರು.
ವಿವಿಧ ಕ್ಷೇತ್ರಲ್ಲಿ ಸಾಧನೆ ಮಾಡಿದ ತಾಲೂಕಿನ ಹನುಮಂತಪ್ಪ ನಾಯಕರ, ಹಗರಿಬೊಮ್ಮನಹಳಿಯ ಕೆ.ಲಕ್ಷಿö್ಮಪತಿ, ಚುಕ್ಕನಹಲ್ಲು ರಾಮಣ್ಣ, ಕೊಟ್ಟೂರು ತಾಲೂಕಿನ ಎಂ.ಶೇಖರಪ್ಪ, ಹರಪನಹಳ್ಳಿಯ ಷಡಕ್ಷರಪ್ಪ, ಕೂಡ್ಲಿಗಿಯ ಕೆ.ವೆಂಕಟೇಶ, ಹೂವಿಹಡಗಲಿಯ ಶಂಕ್ರಯ್ಯ ತೋಟದೇವರ ಮಠ ಇವರಿಗೆ ಸನ್ಮಾನಿಸಲಾಯಿತು. ಇದೇ ವೇಳೆ ಆಯೋಜಿದ ಸ್ಪರ್ಧೇಯಲ್ಲಿ ವಿಜೇತರಾದವರಿಗೆ ಪ್ರಶಸ್ಥಿ ಪತ್ರವನ್ನು ವಿತರಿಸಲಾಯಿತು.
ಹುಡಾ ಅಧ್ಯಕ್ಷ ಎಚ್.ಎನ್.ಎಫ್.ಇಮಾಮ್ ನಿಯಾಜಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಡಿಡಿ ಎಸ್.ಶ್ವೇತಾ, ಜಿಲ್ಲಾ ಮಕ್ಕಳ ರಕ್ಷಾಣಾಧಿಕಾರಿ ಸಂದೀಪ ಕುಮಾರ ಉಂಕಿ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಅವಿನಾಶಲಿಂಗ ಎಸ್.ಗೋಟಖಿಂಡಿ, ಸಿಡಿಪಿಒ ಸಿಂದೂ ಯಲಿಗಾರ್, ಬ್ರಹ್ಮ ಕುಮಾರಿ ಮಾನಸಾ ಇತರರಿದ್ದರು.