

ಹೊಸಪೇಟೆ: ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ಸ್ವಚ್ಚ ಭಾರತ್ ಮಿಷನ್ ಸಹಯೋಗದಲ್ಲಿ ಐತಿಹಾಸಿಕ ತಾಣ ಹಂಪಿಯ ವಿಜಯವಿಠಲ ದೇಗುಲದ ಆವರಣದಲ್ಲಿ ಸ್ವಚ್ಚತಾ ಹೀ ಸೇವಾ ಪಾಕ್ಷಿಕ ೨೦೨೪ರ ನಿಮಿತ್ತ ಸ್ವಚ್ಛತಾ-ಹಿ-ಸೇವಾ ಆಂದೋಲನ ಕಾರ್ಯಕ್ರಮಕ್ಕೆ ಜಿ.ಪಂ. ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ ಶಾ ಬುಧವಾರ ಚಾಲನೆ ನೀಡಿದರು.
ನಂತರ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಜನರ ಆರೋಗ್ಯ ಉತ್ತಮವಾಗಿರಬೇಕಾದರೆ ನೈರ್ಮಲ್ಯ ಅಗತ್ಯವಾಗಿದೆ. ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರದಂತೆ ಸ್ವಚ್ಚತೆಯ ಕುರಿತು ಜಾಗೃತರಾಗಬೇಕಿದೆ. ಈ ಕಾರ್ಯಕ್ರಮ ಅ.೨ರವರೆಗೆ ಹಮ್ಮಿಕೊಂಡಿದ್ದು ಎಲ್ಲರ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.
ತಾ.ಪA. ಇಒ ಡಿ.ಲಕ್ಷಿö್ಮಕಾಂತ್ ಆಂದೋಲನದ ಪ್ರತಿಜ್ಞಾ ವಿದಿ ಬೋಧಿಸಿ ಮಾತನಾಡಿ, ಗ್ರಾಮಗಳಲ್ಲಿ ಹೆಚ್ಚು ಕಸ ಸಂಗ್ರಹವಾಗುವ ಸ್ಥಳಗಳು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚಿನ ರೀತಿಯಲ್ಲಿ ಸ್ವಚ್ಛತೆಯ ಅರಿವು ಮೂಡಿಸಬೇಕು. ಸಮುದಾಯಗಳ ಶೌಚಾಗೃಹ ಬಳಕೆ ಮಾಡಲು ಉತ್ತೇಜಿಸುವಂತಹ ಕಾರ್ಯಕ್ರಮವನ್ನು ನಿರಂತರವಾಗಿ ಅ.೦೨ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದರು
ಜಿ.ಪA. ಯೋಜನಾ ನಿರ್ದೇಶಕ ಅಶೋಕ ಜಿ.ತೋಟದ್, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇ ದೀಪಾ, ಜೆ.ಜೆ.ಎಂನ ಜಿಲ್ಲಾ ವ್ಯವಸ್ದಾಪಕಿ ಮಹೇಶ್ವರಿ, ಎನ್‌ಆರ್‌ಎಲ್‌ಎಂಡಿಪಿಎA ಪ್ರಸನ್ನ, ಜಿಲ್ಲಾ ವ್ಯವಸ್ದಾಪಕಿ ಕಲಾವತಿ ಇತರರಿದ್ದರು.