ಸ್ವಚ್ಛತೆಗಾಗಿ ಅಧಿಕಾರಿಗಳಿಗೆ ಆರತಿ ಮಾಡಬೇಕೆ?

MEETING
ಹೊಸಪೇಟೆ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷೆ ಎ.ಲತಾ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.
Published on

ಹೊಸಪೇಟೆ: ಅಧಿಕಾರಿಗಳು ಕಿಂತಿತ್ತು ಬೆಲೆ ಕೊಡುವುದಿಲ್ಲ. ವಾರ್ಡ್ ಗಳಲ್ಲಿ ಒಂದು ಸ್ವಚ್ಛತೆಗಾಗಿ ಒಂದು ಪೋನ್ ಮಾಡಿದರೆ ಪ್ರತಿಕ್ರಿಯೆ ನೀಡಲ್ಲ. ಆಡಳಿತ ವ್ಯವಸ್ಥೆಯಲ್ಲಿ ನಮಗೆ ಅಧಿಕಾರ ಇದ್ದರೂ ಇಲ್ಲದಂತ ಪರಿಸ್ಥಿತಿ ಎದುರಾಗಿದೆ ಎಂದು ನಗರಸಭೆ ಉಪಾಧ್ಯಕ್ಷ ಶಕ್ಷಾವಲಿ, ಸದಸ್ಯರಾದ ರಾಘವೇಂದ್ರ, ಹುಲಗಪ್ಪ ಆಗ್ರಹಿಸಿದರು.

ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಧ್ಯಕ್ಷೆ ಎ.ಲತಾ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆಯಲ್ಲಿ ಪರಿಸರ ಇಂಜಿನಿಯರ್ ಆರತಿ ನಗರದಲ್ಲಿ ಸ್ವಚ್ಛತೆ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಅವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಒತ್ತಾಯಿಸಿದರು.

ಇದಕ್ಕ ಸಾತ್ ನೀಡಿದ ಇತರೆ ಸದಸ್ಯರು, ಬೆಳಗ್ಗೆ ನಾವು 6 ಗಂಟೆಗೆಲ್ಲ ವಾರ್ಡ್ ಗಳಲ್ಲಿ ಸ್ಥಳೀಯರು ನಮ್ಮ ಮನೆಗಳಿಗೆ ಬರುತ್ತಿದ್ದಾರೆ. ವಾರ್ಡ್ ನ ಸ್ವಚ್ಚತಾ ಸಿಬ್ಬಂದಿ, ಸೂಪರ್ವೈಸರ್ ಕೇಳಿದರೆ ನಮಗೆ ಕೆಳಬೇಡಿ ಇಂಜಿನಿಯರ್ ಆರತಿ ಅವರಿಗೆ ಕೇಳಿ ಎನ್ನುತ್ತಾರೆ. ಆದರೆ ಇಂಜಿನಿಯರ್ ಆರತಿ ಅವರ 100 ಬಾರಿ ಕರೆ ಮಾಡಿದರು, ಪ್ರತಿಕ್ರಿಯೆ ನೀಡುವುದಿಲ್ಲ. ಇವರಿಂದ ಸ್ವಚ್ಛತೆ ನಿರ್ವಹಣೆ ಮಾಡಲು ಆಗುತ್ತಿಲ್ಲ. ಇನ್ನು ನಗರಸಭೆ ಇಂಜಿನಿಯರ್ ಸೇರಿದಂತೆ ಇತರೆ ಸಿಬ್ಬಂದಿಗಳು ಕೂಡ ನಮ್ಮ ಮಾತಿಗೆ ಬೆಲೆ ನೀಡುವುದಿಲ್ಲ. ಅಂದ ಮೇಲೆ ನಾವು ಯಾಕೆ ಇಲ್ಲಿ ಜನ ಪ್ರತಿ ನಿಧಿಗಳಾಗಬೇಕು? ಯಾರು ಹಣ ಕೊಡುತ್ತಾರೋ ಅವರ ಕಡೆ ವಾಲುತ್ತಾರೆ. ದಯಮಾಡಿ ಇಂಥವರನ್ನು ಬದಲಿಸಿ. ಇಲ್ಲವೇ ಇವರ ಮೇಲೆ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯೆಸಿದ ಪಿ ಡಿ (ಪ್ರಭಾರ ಪೌರಾಯುಕ್ತ) ಮನೋಹರ್, ಜನಪ್ರತಿನಿಧಿಗಳು ಹಾಗೂ ಜನ ಪ್ರತಿನಿಧಿಗಳು ಜನರ ಸೇವೆಗಾಗಿ ಬಂದವರು. ಇಲ್ಲಿ ನಮ್ಮ ಸಮನ್ವಯತೆ ಕೊರತೆ ಜನಸಾಮಾನ್ಯರಿಗೆ ತೊಂದರೆ ಆಗಬಾರದು. ನಗರದಲ್ಲಿ ಮೊದಲು ಸ್ವಚ್ಛತೆಯನ್ನು ಕಾಪಾಡಿ, ಸದಸ್ಯರಿಗೆ ನಿಯಮಾನುಸಾರ ಅವರ ಕೆಲಸ ಕಾರ್ಯಗಳನ್ನು ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸರ್ಕಾರಿ ಜಮೀನು ಉಳಿಸಿ:

ನಗರಸಭೆಯಲ್ಲಿ ಹಲವು ಸರ್ಕಾರಿ ಜಮೀನುಗಳಿವೆ. ಅವುಗಳ ಒತ್ತುವರಿಯಾಗುತ್ತಿವೆ. ಅದರಿಂದ ನಗರಸಭೆಯ ಅಧಿಕಾರಿಗಳು ಕೂಡಲೇ ಸ್ವಾದಿನ ಪಡಿಸಿಕೊಂಡು ಜಾಗಕ್ಕೆ ತಂತಿ ಬೇಲಿ ಹಾಕಿ ಕೊಡಬೇಕೆಂದು ಕಳೆದ ಒಂದು ವರ್ಷದ ಹಿಂದೆ ಸಭೆಯಲ್ಲಿ ತರಲಾಗಿತ್ತು. ಅನುಮತಿ ಕೂಡ ದೊರೆಯಿತು ಆದರೆ ಇವರಿಗೆ ನಗರಸಭೆಯಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯ ಲತಾ ಸಂತೋಷ್ ಒತ್ತಾಯಿಸಿದರು. ಇದಕ್ಕೆ ಸಾತ್ ನೀಡಿದ ಸದಸ್ಯ ಅಬ್ದುಲ್ ಖಾದಿರ್, ನಗರಸಭೆ ವ್ಯಾಪ್ತಿಯ ಹಲವು ಸರ್ಕಾರಿ ಜಮೀನುಗಳನ್ನು ಕೆಲವರು 2 ಲಕ್ಷ ರೂಪಾಯಿ ಅಧಿಕಾರಿಗೆ ನೀಡಿ ಗುಡಿಸಲು ಹಾಕುತ್ತಿದ್ದಾರೆ. ನಂತರ ಬಹಳ ವರ್ಷಗಳ ವಾಸವಿದ್ದೇವೆ ಎಂದು ಡೋರ್ ನಂಬರ್ ಮಾಡಿಸುತ್ತಾರೆ. ಇವೆಲ್ಲ ಅಧಿಕಾರಿಗಳ ಸಹಕಾರಗಳಿಂದ ನಡೆಯುತ್ತಿದೆ ಇದನ್ನು ತಡೆಯಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಪೀಡಿ ಮನೋಹರ್ ಇಂತಹ ಕಾನೂನುಬಾಹಿರ ನಡೆದರೆ, ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗೆ ಎಚ್ಚರಿಕೆ ನೀಡಿದರು.

ನಾಯಿಯಿಂದ ನ್ಯಾಯ ಕೋಡಿಸಿ:

ನಗರದಲ್ಲಿ ಜನರಿಗಿಂತ ನಾಯಿಗಳ ಹೆಚ್ಚಾಗಿವೆ. ಪ್ರತಿವರ್ಷ ನಾಯಿಗಳ ನಿರ್ವಹಣೆಗಾಗಿ ಹಾಗೂ ಸಂತಾನ ಹರಣಕ್ಕಾಗಿ ಅಂದಾಜು 16 ಲಕ್ಷ ರೂಪಾಯಿ ಖರ್ಚಾಗುತ್ತಿದೆ. ಈ ರೀತಿ ನಡೆದರೆ ನಾಯಿಗಳ ಬೆಳವಣಿಗೆಗೆ ಕಡಿವಾಣ ಹಾಕಲು ಸಾಧ್ಯವಾಗಲ್ಲ. ಕಳೆದ ಬಾರಿ ನಾಯಿಗಳಿಗೆ ಸಂತಾನಹರಣ ಮಾಡಿಸಿದಿರಿ. ಆದರೂ ನಾಯಿಗಳು ಕಡಿಮೆಯಾಗುತ್ತಿಲ್ಲ. ಇದರ ಬದಲಿಗೆ ಅವುಗಳ ನಿರ್ವಹಣೆಗೆ ಸ್ಥಳ ನಿಗದಿ ಮಾಡಿ ಯಾವುದಾದರೂ ಏಜೆನ್ಸಿಗೆ ಜವಾಬ್ದಾರಿ ನೀಡಿ ಎಂದು ಸದಸ್ಯರು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net