

ಹೊಸಪೇಟೆ: ಇಲ್ಲಿನ ನಗರಸಭೆಯ ಸಭಾಂಗಣದಲ್ಲಿ ಅಧ್ಯಕ್ಷ ರೂಪೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆ ಕೇವಲ 50 ನಿಮಿಷ್ಯದಲ್ಲಿ ಮುಕ್ತಾಯಗೊಳಿಸಲಾಯಿತು.
ಬೆಳಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಸಭೆ, 11.30ಕ್ಕೆ ಆರಂಭವಾಯಿತು. 27 ವಿಷಯಗಳ ವಿಶೇಷ ಸಭೆಯಲ್ಲಿ ಮೊದಲಿಗೆ ಕೆಲ ಸದಸ್ಯರಾದ ಗುಜ್ಜಲ ರಘು, ಗೌಸ್ ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ಪ್ರಸ್ತಾಪಿಸಿದರು. ಈ ಸಭೆಯ ವಿಷಯಕ್ಕೆ ತಕ್ಕ ಪ್ರಶ್ನೆಗಳಿದ್ದರೆ ಕೇಳಿ. ಉಳಿದ ಪ್ರಶ್ನೆಗಳಿಗೆ ಮುಂದೆ ಸಭೆ ಮಾಡಿ ಚರ್ಚೆ ಮಾಡೋಣ ಎಂದು ಅಧ್ಯಕ್ಷ ರೂಪೇಶ್ ಕುಮಾರ್ ಉತ್ತರಿಸಿದರು. 27 ವಿಷಯದಲ್ಲಿ ನಾಲ್ಕು ಅಂಗನಾವಡಿ ಕಟ್ಟಡಗಳ ಬೇಡಿಕೆ ಹೊರತು ಪಡಿಸಿ ಉಳಿದ ವಿಷಯಗಳನ್ನು ಮುಂದಿನ ಸಭೆಯಲ್ಲಿ ಚರ್ಚೆ ಮಾಡೋಣ ಎಂದು ಕೇವಲ 15 ನಿಮಿಷಗಳಲ್ಲಿ ಸಣ್ಣ ಪುಟ್ಟ ವಿಚಾರಗಳನ್ನು ಓದಿ, ಓದಲಾಯಿತು, ಒಪ್ಪಲಾಗಿದೆ ಎಂದು ಸಭೆ ಮುಕ್ತಯಗೊಳಿಸಿದರು.
ನಗರದಲ್ಲಿ ಯುಜಿಡಿ ಸಮಸ್ಯೆ, ಕುಡಿವ ನೀರಿನಲ್ಲಿ ಚರಂಡಿ ನೀರು ಸೇರಿ ವಾಂತಿ ಬೇದಿ ಪ್ರಕರಣಗಳು ದಾಖಲಾಗುತ್ತಿವೆ. ಇನ್ನೂ ಫಾರಂ ನಂಬರ್-3, ಖಾತೆ ವರ್ಗವಣೆ, ಕಂದಾಯ ಕರವಸುಲಿಯಲ್ಲಿ ಸಮಸ್ಯೆ ಸೇರಿಂದತೆ ಹತ್ತು ಹಲವು ಸಮಸಮಸ್ಯೆಗಳ ಸರಮಾಲೆಯಿದೆ. ಪ್ರಶ್ನೆ ಮಾಡಲು ಬಿಡದೇ ಕೇವಲ 15 ನಿಮಿಷ್ಯದಲ್ಲಿ ಸಭೆ ಮುಗಿದಿದೆ ಹೇಳಿ ಎದ್ದು ಹೋದರು. ಕೇವಲ ಅಂಗನವಾಡಿ ವಿಚಾರವಾಗಿ ಸಭೆ ಕರೆಯಬೇಕಿತ್ತ? ಇನ್ನೂ ನಗರದಲ್ಲಿ ಯಾವ ಸಭೆಯಿಲ್ಲವ? ನಮ್ಮ ಪ್ರಶ್ನೆ ಯಾರ ಮುಂದೆ ಹೇಳಿಕೊಳ್ಳಬೇಕು? ಎಂದು ಸದಸ್ಯರ ಆಕ್ರೋಶ ವ್ಯಕ್ತ ಪಡಿಸಿದರು.