ನಗರಸಭೆ ಸದಸ್ಯರಿಂದ ರಕ್ಷಣೆ ನೀಡಿ

28 MANJU 01
Published on

ಹೊಸಪೇಟೆ: ನಗರಸಭೆ ಸದಸ್ಯರಿಂದ ನೌಕರರ ತೇಜೋವಧೆ ಮಾಡುತ್ತಿರುವುದನ್ನು ಖಂಡಿಸಿ ರಾಜ್ಯ ಪೌರನೌಕರರ ಸಂಘದಿAದ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರಗೆ ಬುಧವಾರ ಮನವಿ ಸಲ್ಲಿಸಲಾಯಿತು.

ದಿನದಿಂದ ದಿನಕ್ಕೆ ಷರವೇಗದಲ್ಲಿ ನಗರ ಬೆಳೆಯುತ್ತಿದೆ. ಸುಮಾರು ಮೂರು ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಹೊಂದಿದೆ. ನಗರಸಭೆಯಲ್ಲಿ ಕಂದಾಯ ಶಾಖೆಯಲ್ಲಿ ಆಸ್ತಿ ಹಕ್ಕು ವರ್ಗಾವಣೆ, ಇ ಆಸ್ತಿ ಹೊಸ ಹಾಗೂ ನವೀಕರಣ, ತಿದ್ದುಪಡಿ ಮತ್ತು ಎಸ್.ಎ.ಎಸ್, ನೀರಿನ ಶುಲ್ಕ ವಸೂಲಾತಿ ಸೇರಿದಂತೆ ಇತರೆ ಸೇವೆಗಳನ್ನು ಸಲ್ಲಿಸುತ್ತಿದ್ದೇವೆ. ನಗರಸಭೆಯ ಕೆಲ ಜನ ಪ್ರತಿನಿದಿಗಳು ಅನಧಿಕೃತ ಬಡಾವಣೆಗಳಿಗೆ ಅಧಿಕೃತ ಫಾರಂ-3 ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಕಚೇರಿ ಕರ್ತವ್ಯಗಳ ಸಮರ್ಪಕ ನಿರ್ವಹಣೆಗೆ ಅಡ್ಡಿಪಡಿಸುತ್ತಿದ್ದಾರೆ. ಇದ್ದ ಪೌರ ಕಾರ್ಮಿಕರಲ್ಲಿ 35 ವಾರ್ಡ್ಗಳಲ್ಲಿ ದಿನ ನಿತ್ಯ ಸ್ವಚ್ಚತೆ ಸೇವೆ ನಿರ್ವಹಿಸಲಾಗುತ್ತಿದೆ. ಆದರು ಸಹ ಕೆಲವು ಜನಪ್ರತಿನಿದಿಗಳಿಗೆ ನೌಕರರಿಗೆ, ಪೌರ ಕಾರ್ಮಿಕರಿಗೆ, ಮೇಲ್ವಿಚಾರಕರಿಗೆ ಅವಾಚ್ಯಾ ಶಬ್ದಗಳಿಂದ ನಿಂದಿಸಿ ಅವಹೇಳನ ಮಾಡುತ್ತಿರುತ್ತಾರೆ. ಹಾಗೂ ಮೇಲಾಧಿಕಾರಿಗಳ ಮೇಲೂ ಸಲ್ಲದ ದೂರು ಮಾಡುತ್ತಿದ್ದಾರೆ ಎಂದು ಆಗ್ರಹಿಸಿದರು.

ಈ ಹಿಂದೆ ನಿಯಮ ಬಾಹಿರ ಕೃತ್ಯಗಳಿಂದ ದಾಖಲಾತಿ ಸೃಷ್ಟಿಸಿಕೊಂಡAತಹ ಪ್ರಕರಣಗಳು ನಡೆದಿವೆ. ಸರ್ಕಾರಕ್ಕೆ ಕೋಟ್ಯಾಂತರ ಬೆಲೆ ಬಾಳುವ ಆಸ್ತಿಗಳು ನಷ್ಟವಾಗಿವೆ. ಈ ವಿಷಯವಾಗಿ ವಿವಿಧ ನ್ಯಾಯಾಲಯ ಮತ್ತು ಪ್ರಾಧಿಕಾರಗಳಲ್ಲಿ ವಿಚಾರಣೆಗಳು ನಡೆಯುತ್ತಿವೆ. ಹಲವರ ಮೇಲೆ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವೆ. ನಿಯಮ ಬಾಹಿರವಾಗಿ ಕಂದಾಯ ಶಾಖೆ, ತಾಂತ್ರಿಕ ವಿಭಾಗದ, ಹಾಗೂ ಆರೋಗ್ಯ ಶಾಖೆಯ ಸೇರಿದಂತೆ ಇತರೆ ಅನಗತ್ಯವಾಗಿ ನಿಯಮ ಬಾಹಿರ ಕೃತ್ಯಗಳಿಗೆ ಅವಕಾಶ ಬಾರದು. ನಗರಸಭೆಯ ಅಧಿಕಾರಿಗಳಿಗೆ ಹಾಗೂ ನೌಕರರಿಗೆ ಸುರಕ್ಷಿತವಾಗಿ ಸಾರ್ವಜನಿಕ ಸೇವೆ ಸಲ್ಲಿಸಲು ನೌಕರರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಪೌರಾಯುಕ್ತ ಚಂದ್ರಪ್ಪ, ಸಂಘದ ರಾಜ್ಯಾಧ್ಯಕ್ಷ ಕೆ.ಪ್ರಭಾಕರ, ಅಧಿಕಾರಿಗಳಾದ ಆರತಿ, ರವಿಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net