ಹೊಸಪೇಟೆ: ಇಲ್ಲಿನ ನಗರಸಭೆಯಿಂದ ಘನ ತ್ಯಾಜ್ಯವಸ್ತು ನಿರ್ವಹಣೆ ವಿಸ್ತೃತ ಯೋಜನಾ ವರದಿಯನುಸಾರ 112 ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ಪೂರೈಸಲು ಟೆಂಡರ್ ಕರೆಲಾಗಿದ್ದು, ಸಾರ್ವನಿಕರು ಮಧ್ಯವರ್ತಿಗಳ ಮೋಸದ ಜಾಲಕ್ಕೆ ಒಳಗಾಗಬಾರದು ಎಂದು ನಗರಸಭೆಯ ಪೌರಾಯುಕ್ತ ತಿಳಿಸಿದ್ದಾರೆ.
ನಗರಸಭೆಯ ಹೊರಗುತ್ತಿಗೆ ಸಿಬ್ಬಂದಿಯ ಕೆಲಸವನ್ನು ಮಧ್ಯವರ್ತಿಗಳು ಕೊಡಿಸುವುದಾಗಿ ಹೇಳಿ ಹಣ ವಸುಲಿ ಮಾಡುತ್ತಿರುವುದು ತಿಳಿದುಬಂದಿದ್ದು, ಹೊರಗುತ್ತಿಗೆ ಸಿಬ್ಬಂದಿಯನ್ನು ಟೆಂಡರ್ ಆಧಾರದ ಮೇಲೆ ಸರ್ಕಾರ ನಿಯಮಗಳ ಅನುಸಾರ ಗುತ್ತಿಗೆದಾರರೆ ಪೂರೈಸುತ್ತಾರೆ. ಸಾರ್ವಜನಿಕರು ಮದ್ಯವರ್ತಿಗಳಿಗೆ ಹಣ ನೀಡಿ ಮೋಸಹೋಗಿ ನಗರಸಭೆಗೆ ದೂರು ಸಲ್ಲಿಸಿದ್ದಲ್ಲಿ ಅದಕ್ಕೆ ನಗರಸಭೆಯು ಯಾವುದೇ ರೀತಿಯಲ್ಲಿ ಹೊಣೆಯಾಗಿರುವುದಿಲ್ಲ. ಮೋಸಕ್ಕೆ ಒಳಗಾದವರೆ ನೇರ ಹೊಣೆಯಾಗಿರುತ್ತಾರೆ ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.