

ಹೊಸಪೇಟೆ : ಎಲ್ಲಾಸದಸ್ಯರಿಗೆ ವಿಶ್ವಸಕ್ಕೆ ತಗೆದುಕೊಂಡು ನಗರದಲ್ಲಿ ಅಭಿವೃದ್ಧಿ ಕಡೆ ಗಮನ ಹರಿಸಲಾಗುತ್ತದೆ ಎಂದು ಎಂದು ನಗರಸಭೆ ನೂತನ ಅಧ್ಯಕ್ಷ ಎನ್.ರೂಪೇಶ್‌ಕುಮಾರ ಹೇಳಿದರು.
ಸರ್ಕಾರಿ ರಜೆಯ ದಿನ ಇಲ್ಲಿನ ನಗರಸಭೆಯಲ್ಲಿ ಸೋಮವಾರ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಯಾವುದೇ ವಿಘ್ನ ಸಂಭವಿಸಬಾರದು, ನಗರದ ಅಭಿವೃದ್ಧಿಗೆ ಅಡ್ಡಿ ಬರದಂತೆ ಹೋಮ ಮಾಡುವ ಮೂಲಕ ಅಧಿಕಾರ ಪದಗ್ರಹಣ ಸ್ವೀಕರಿಸಲಾಗಿದೆ ಎಂದರು.
ಕುಡಿವ ನೀರಿನ ಟ್ಯಾಂಕರ್ ಕಾಮಗಾರಿ ಮುಗಿಸಿ, ಒಂದು ವರ್ಷದೊಳಗೆ 24*7 ಕಾಮಗಾರಿ ಮುಗಿಸಲು ಪ್ರಯತ್ನಿಸಲಾಗುವುದು. ಯುಜಿಡಿ ಬಹಳ ದೊಡ್ಡ ಸಮಸ್ಯೆಯಾಗಿದೆ. ಹೊಸ ಯೋಜನೆ ರೂಪಿಸಿ, 4 ಕೋಟಿ ಅನುದಾನವಿದ್ದು ಕ್ರಿಯಾಯೋಜನೆ ರೂಪಿಸಿ, ಜಿಲ್ಲಾಧಿಕಾರಿಗಳ ಅನುಮತಿ ಪಡೆದು, ಯಂತ್ರ ಹಾಗೂ ಪ್ರತ್ಯೇಕ ಕಾರ್ಮಿಕರನ್ನು ನಿಯೋಜಿಸಿ ಕ್ರಮವಹಿಸಲಾಗುವುದು. ವಿಶ್ವಪ್ರವಾಸಿ ತಾಣವಾಗಿರುವುದರಿಂದ ಸ್ನಾನಗೃಹ, ಶೌಚಾಲಯ ಸೇರಿ ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದರು.
ನಗರದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಹೊರವಲಯದಲ್ಲಿ 5 ಎಕರೆಯಲ್ಲಿ ಬೇಲಿ ಹಾಕಿಸಿ, ದಾನಿಗಳಿಂದ ನಗರಸಭೆಯಿಂದ ಆಹಾರದ ವ್ಯವಸ್ಥೆ ಮಾಡಲಾಗುವುದು. ಸರ್ಕಾರಿ ಜಾಗಗಳನ್ನು ಗುರುತಿಸಿ, ರಕ್ಷಣೆಗೆ ಫೆನ್ಸಿಂಗ್ ಅಳವಡಿಸಲಾಗುವುದು. ನಗರದಲ್ಲಿಮ ಶೌಚಗೃಹಗಳಿಗೆ ಅನುದಾನದ ಸಮಸ್ಯೆ ಇಲ್ಲ. ಯೋಜನೆ ರೂಪಿಸಿ ನಿರ್ಮಿಸಲಾಗುವುದು. ನಗರದಲ್ಲಿ ರಸ್ತೆ ಮತ್ತು ಪಾರ್ಕಿಂಗ್ ಸಮಸ್ಯೆ ಬಗ್ಗೆ ಸಂಚಾರ ಪೊಲೀಸರ ಜತೆ ಚರ್ಚಿಸಿ ಕ್ರಮವಹಿಸಲಾಗುವುದು ಎಂದರು.
ನಗರಸಭೆಯಲ್ಲಿ ಸಮನ್ವಯತೆ ಸಮಸ್ಯೆ ಇಲ್ಲ. ಆಡಳಿತದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆಗುತ್ತವೆ. ಪೌರಾಯುಕ್ತರು ತಪ್ಪು ಮಾಡಿದಾಗ ಪ್ರತಿಭಟಿಸಿ ಎಚ್ಚರಿಸುವುದು ನಮ್ಮ ಕರ್ತವ್ಯ. ನಾವು ಪ್ರತಿಭಟಿಸಿದಾಗ ಅಧ್ಯಕ್ಷರಿರಲಿಲ್ಲ. ಈಗ ನಾವೇ ಅಧ್ಯಕ್ಷರಾಗಿದ್ದೇವೆ. ನಮ್ಮ ಸೂಚನೆಯಂತೆ ಕೆಲಸ ಮಾಡುತ್ತಾರೆ. ನಗರಸಭೆ ಸದಸ್ಯರು ಅಕ್ರಮ ಕೆಲಸ ಮಾಡಿಸಿಕೊಳ್ಳುತ್ತಾರೆ ಎಂಬುದು ಸುಳ್ಳು ಮಾಹಿತಿ. ಅಂತಹ ದೂರು ಬಂದರೆ ಕ್ರಮ ಕೈಗೊಳ್ಳುತ್ತೇನೆ ಎಂದರು. ನೂತನ ಉಪಾಧ್ಯಕ್ಷ ರಮೇಶ್ ಗುಪ್ತಾ ಇದ್ದರು.