ಸರ್ಕಾರಿ ನೌಕರರೆಂದು ಘೋಷಿಸಿ

27 MANJU 01
Published on

ಹೊಸಪೇಟೆ: ಪೌರನೌಕರರನ್ನು ಸರ್ಕಾರಿ ನೌಕರರೆಂದು ಘೋಷಣೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಪೌರಸೇವಾ ನೌಕರರ ಸಂಘÀದ ನೇತೃತ್ವದಲ್ಲಿ ಇಲ್ಲಿನ ನಗರಗರಸಭೆ ಸೇರಿದಂತೆ ಜಿಲ್ಲೆಯ ಪುರಸಭೆ ತ್ತು ಪಟ್ಟಣ ಪಂಚಾಯಿತಿ ಕಚೇರಿಗಳ ಮುಂದೆ ಮಂಗಳವಾರದಿAದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದರು.

ಪೌರ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕು. ಕೆಜಿಐಡಿ, ಜಿಪಿಎಸ್, ಜ್ಯೋತಿ ಸಂಜೀವಿನಿ ಸೇರಿದಂತೆ ಸರ್ಕಾರಿ ನೌಕರರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಪೌರನೌಕರರಿಗೂ ಜಾರಿಯಾಗಬೇಕು. ಹೊರಗುತ್ತಿಗೆ ಮೇಲೆ ಕಾರ್ಯನಿರ್ವಹಿಸುತ್ತಿರುವ ನೀರು ಸರಬರಾಜು ಸಿಬ್ಬಂದಿ, ಲೋರ‍್ಸ್, ಕ್ಲೀರ‍್ಸ್, ಪೌರಕಾರ್ಮಿಕರು, ಸೂಪರವೈಸರ್, ಕಂಪ್ಯೂಟರ್‌ಆಪರೇಟರ್, ಜ್ಯೂನಿಯರ್ ಪ್ರೋಗ್ರಾಮರ್ ಸೇರಿದಂತೆಗುತ್ತಿಗೆ/ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ನೇರ ಪಾವತಿ ವೇತನ ಮಾಡಬೇಕು. ಸೇವೆ ಖಾಯಂ ಮಾಡಬೇಕು. 2022-23ನೇ ಸಾಲಿನಲ್ಲಿ ಪೌರಕಾರ್ಮಿಕರ ವಿಶೇಷ ನೇಮಕಾತಿ ಅಡಿಯಲ್ಲಿ ನೇಮಕಗೊಂಡಿರುವ ನೌಕರರಿಗೆ ಸ್ಥಳೀಯ ಸಂಸ್ಥೆಗಳ ನಿಧಿಯಲ್ಲಿ ವೇತನ ಪಡೆಯಲು ಆದೇಶಿಸಿರುವುದನ್ನು ರದ್ದುಪಡಿಸಿ, ಎಸ್‌ಆಫ್‌ಸಿ ಅನುದಾನದಲ್ಲಿ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಪೌರಸೇವಾ ನೌಕರರ ಸಂಘÀದ ತೀರ್ಮಾನದಂತೆ, ನಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಕ್ಕೆ 45 ದಿನಗಳ ಗಡುವು ನೀಡಲಾಗಿತ್ತು. ಬೇಡಿಕೆಗಳ ಈಡೇರಿಕೆಗಾಗಿ ಸಾವಜನಿಕರಿಗೆಯಾವುದೇತೊಂದರೆ ಆಗದಂತೆ 45 ದಿನಗಳ ಕಾಲ ತೋಳಿಗೆ ಕಪ್ಪು ಪಟ್ಟಿ ಧರಿಸಿ, ಪ್ರತಿಭಟನೆ

ನಡೆಸಿದೆವು. ಆದರೆ, ಬೇಡಿಕೆಗಳು ಈಡೇರದ ಹಿನ್ನಲೆಯಲ್ಲಿ ನೀಡಿದ್ದ ಗಡುವು ಸೋಮವಾರ ಕೊನೆಗೊಂಡಿತು. ಸ್ಥಳೀಯ ಕಚೇರಿಗಳಲ್ಲಿ ಎಲ್ಲಾ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದೇವೆ. ನಮ್ಮ ಬೇಡಿಕೆಗಳು ಈಡೇರುವ ವರೆಗೆ ಮುಷ್ಕರ ಮುಂದು ವರೆಯಲಿದೆ ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net