ಜಿಲ್ಲೆಯಲ್ಲಿ ಸಂಭ್ರಮದ ಕ್ರೀಸ್‌ಮಸ್

25 MANJU 03
Published on

ಹೊಸಪೇಟೆ: ನಗರ ಸೇರಿದಂತೆ ಜಿಲ್ಲೆಯಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಬುಧವಾರ ಕ್ರೈಸ್ತರು ಸಡಗರ, ಸಂಭ್ರಮದಿAದ ಆಚರಿಸಿದರು.

ಮಂಗಳವಾರ ತಡರಾತ್ರಿಯಿಂದ ಬುಧವಾರ ಬೆಳಗಿನ ಜಾವದ ವರೆಗೆ ಚರ್ಚ್ಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ಪ್ರಾರ್ಥನೆಗಳು ನಡೆಯಿತು. ಬೆಳಿಗ್ಗೆ ವಿವಿಧ ಬಡಾವಣೆಗಳಿಂದ ಕ್ರೆöÊ್ರಸ್ತರು ಚರ್ಚ್ಗೆ ಬಂದು ಮೇಣದ ಬತ್ತಿ ಬೆಳಗಿ, ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

ಕ್ರೈಸ್ತ ಧರ್ಮ ಗುರುಗಳು ಯೇಸುವಿನ ಜನನ, ಮಹತ್ಕಾರ್ಯ, ಧರ್ಮ ಮಾರ್ಗದಲ್ಲಿ ಹೇಗೆ ನಡೆಯಬೇಕು ಎಂಬುದನ್ನು ವಿವರಿಸಿದರು. ವಯಸ್ಕ ಪುರುಷರು ಸೂಟು ಬೂಟು, ಮಹಿಳೆಯರು ಗೌನ್, ಸೀರೆ ತೊಟ್ಟಿದರೆ, ಚಿಣ್ಣರು, ಮೇರಿ, ಸಾಂತಾ ಕ್ಲಾಸ್ ದಿರಿಸಿನಲ್ಲಿ ಕಂಗೊಳಿಸಿದರು. ಸಾಮೂಹಿಕ ಪ್ರಾರ್ಥನೆ ಮುಗಿದ ನಂತರ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಚರ್ಚ್ ಆವರಣಗಳಲ್ಲಿ ವಿಶೇಷವಾಗಿ ಮಾಡಿದ್ದ ಗೋದಲಿ ಕಣ್ತುಂಬಿಕೊAಡರು. ಮೊಬೈಲ್ ಅದರ ಛಾಯಾಚಿತ್ರ ಸೆರೆ ಹಿಡಿದರು. ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಎಲ್ಲೆಡೆ ಸಂಭ್ರಮ ಮನೆ ಮಾಡಿತ್ತು. ನಗರದ ಕೆಥೋಲಿಕ್ ಚರ್ಚ್, ಸಿ.ಎಸ್.ಐ. ಚರ್ಚ್, ತಾಲೂಕಿನ ಕಮಲಾಪುರ, ಮರಿಯಮ್ಮನಹಳ್ಳಿ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆ ಜರುಗಿತು. ನಂತರ ಕ್ರೈಸ್ತರು ಅವರ ಮನೆಗಳಲ್ಲಿ ಕೇಕ್ ಕತ್ತರಿಸಿ ಕುಟುಂಬ ಸದಸ್ಯರೊಂದಿಗೆ ಹಬ್ಬ ಆಚರಿಸಿದರು. ಬಗೆಬಗೆಯ ಬಿಸ್ಕತ್, ಚಾಕಲೇಟ್, ಸಿಹಿ ಖಾದ್ಯ ಉಣಬಡಿಸಿದರು. ನಂತರ ಉಡುಗೊರೆ ಕೊಟ್ಟು ಶುಭ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net