

ಹೊಸಪೇಟೆ: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ನವರ 905ನೇ ಜಯಂತೋತ್ಸವ ಮಂಗಳವಾರ ಆಚರಿಸಲಾಯಿತು.
ಶಿಕ್ಷಕ ಬಿ.ಕೊಟ್ರೇಶ್ ಮಾತನಾಡಿ, ಚೌಡಯ್ಯನವರು ಶಿವಶರಣ ಹಾಗೂ ವಚನಕಾರರು ಉಳಿದೆಲ್ಲಾ ವಚನಕಾರರಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇವರದು. ವೃತ್ತಿಯಿಂದ ಅಂಬಿಗ ಪ್ರವೃತ್ತಿಯಲ್ಲಿ ಅನುಭಾವಿ. ನೇರ ನಿರ್ಭೀತ ನುಡಿಗಳಿಂದ ವಚನಗಳನ್ನು ಬರೆದಿದ್ದಾರೆ. ಚೌಡಯ್ಯನವರಲ್ಲಿ ಬಸವಣ್ಣನವರ ವೈಚಾರಿಕತೆ, ಅಲ್ಲಮಪ್ರಭುವಿನ ಅನುಭಾವಿಕ ನಿಲುವು, ಬೆರೆತು ವಿಶಿಷ್ಟ ಅನುಭವ ಮತ್ತು ಅನುಭಾವಗಳೆರಡು ಇವೆ. ಆ ಮೂಲಕ ಸಮ ಸಮಾಜ ನಿರ್ಮಾಣವಾಗಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಈ.ಬಾಲಕೃಷ್ಣಪ್ಪ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಸಿದ್ದಲಿಂಗೇಶ ರಂಗಣ್ಣನವರ್, ಯೋಜನಾ ನಿರ್ದೇಶಕ ಅನ್ನದಾನಸ್ವಾಮಿ, ಪ್ರಮುಖರಾದ ಅಂಬಾಡಿ ನಾಗರಾಜ, ವೈ.ಯಮುನೇಶ್, ಎಸ್.ಗಾಳೆಪ್ಪ, ಬಾರಕೀರ ನಾಗರಾಜ ಇತರರಿದ್ದರು.