ಮಕ್ಕಳ ಸಾಹಿತ್ಯಕ್ಕೆ ಅಂತರಾಳದ ಅಭಿವ್ಯಕ್ತಿ ಅತ್ಯಗತ್ಯ

23 MANJU 03
Published on

ಹೊಸಪೇಟೆ: ಮಕ್ಕಳ ಸಾಹಿತ್ಯವು ಕೇವಲ ಕಥೆ ಹೇಳುವುದಲ್ಲದೆ, ಮಕ್ಕಳ ಆಲೋಚನೆಗಳು, ಭಾವನೆಗಳು, ಪ್ರಶ್ನೆಗಳು ಮತ್ತು ಅವರ ಸುಪ್ತ ಕನಸುಗಳನ್ನು ಪ್ರತಿಬಿಂಬಿಸಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕöÈತ ಡಾ.ಶಿವಲಿಂಗಪ್ಪ ಹಂದಿಹಾಳ್ ಅಭಿಪ್ರಾಯಪಟ್ಟರು.

ಕನ್ನಡ ವಿವಿಯ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಿಂದ ಪಂಪ ಸಭಾಂಗಣದಲ್ಲಿ ಮಂಗಳವಾರ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಮತ್ತು ಬಾಲ ಸಾಹಿತ್ಯ ಪುರಸ್ಕöÈತರ ವಿಶೇಷ ಉಪನ್ಯಾಸ ಹಾಗೂ ಸಂವಾದ ಕರ‍್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳ ಸಾಹಿತ್ಯಕ್ಕೆ ಮೂಲ ಜಾನಪದ, ಪುರಾಣ, ಪಂಚತಂತ್ರಗಳಲ್ಲಿ ಕಾಣಬಹುದು. ಈ ನಿಟ್ಟಿನಲ್ಲಿ ಮಕ್ಕಳ ಸಾಹಿತ್ಯ ಹುಟ್ಟಲಿಕ್ಕೆ ಕಾರಣ ಮಿಷನರಿಗಳು ಮತ್ತು ಶಾಲೆಗಳು ಆರಂಭದಲ್ಲಿ ಪಠ್ಯ ನೀಡುವ ಸಮಯದಲ್ಲಿ ಮಕ್ಕಳ ಸಾಹಿತ್ಯ ಹುಟ್ಟಿತು. ಸಾಹಿತ್ಯದ ಮೂಲ ಬೇರು ನಮ್ಮ ಜಾನಪದವಾಗಿದೆ. ಮಕ್ಕಳ ಸಾಹಿತ್ಯಕ್ಕೆ ದರ‍್ಘ ಕಾಲದ ಪರಂಪರೆ ಇದ್ದು, ಕನ್ನಡದಲ್ಲಿ ಮಕ್ಕಳ ಸಾಹಿತ್ಯದ ಬೇರನ್ನು ಜಾನಪದ ಪರಂಪರೆಯಲ್ಲಿಯೇ ಕಾಣಬಹುದು. ಜಾನಪದ ಸಾಹಿತ್ಯವನ್ನು ಮಕ್ಕಳಿಗೆ ಸರಳವಾಗಿ ಹೇಳುವುದರ ಮೂಲಕ ಸಾಹಿತ್ಯಿ ತನ್ನ ಬರವಣಿಗೆಯಲ್ಲಿ ಬಾಲ್ಯದ ಮುಗ್ದತೆಯನ್ನು ರೂಢಿಸಿಕೊಳ್ಳಬೇಕು. ಇನ್ನು ಪ್ರಬುದ್ಧ ಮನಸ್ಸು ಕಟ್ಟಿಕೊಡುವ ಕಲ್ಪನೆಯ ಸಾಹಿತ್ಯವೇ ಮಕ್ಕಳ ಸಾಹಿತ್ಯವಾಗಿದೆ ಎಂದರು.

ಕುಲಪತಿ ಡಾ.ಡಿ.ವಿ.ಪರಮಶಿವಮರ‍್ತಿ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡದಲ್ಲಿ ಬಾಲ ಸಾಹಿತ್ಯ ಎನ್ನುವುದಕ್ಕೆ ತುಂಬಾ ಪರಂಪರೆ ಇದೆ. ಬಾಲ್ಯತನದ ಮನಸ್ಸುಗಳು ಹಸಿ ಗೋಡೆಗಳಂತೆ ಆ ಮನಸ್ಸುಗಳನ್ನು ನಾವೂ ಹೇಗೆ ಬೇಕೋ ಹಾಗೆ ರೂಪಿಸಬಹುದು. ಇತ್ತೀಚಿನ ಪಾಲಕರು ಮಕ್ಕಳಿಗೆ ಬಾಹ್ಯ ಬೇಡಿಕೆ ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಅಂತರಂಗ ಬೆಳವಣಿಗೆ ನೀಡುವಲ್ಲಿ ಪೋಷಕರು ವಿಫಲವಾಗಿದ್ದರೆ ಎಂದು ತಿಳಿಸಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕöÈತ ಆರ್.ದಿಲೀಪ್‌ಕುಮಾರ, ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬಂಡ, ಪ್ರಾಧ್ಯಾಪಕರಾದ ಡಾ.ಗೋವಿಂದ, ಡಾ.ವೆಂಕಟಗಿರಿ ದಳವಾಯಿ, ಪ್ರಮುಖರಾದ ಯಲ್ಲಪ್ಪ ಹಂದ್ರಾಳ, ಡಾ.ಎಂ.ಮಲ್ಲಿಕರ‍್ಜುನಗೌಡ, ಡಾ.ನಾಗಣ್ಣ ಕಿಲಾರಿ, ಡಾ.ಸತೀಶ ಪಾಟೀಲ್, ಡಾ.ವೆಂಕಟೇಶ ಇಂದ್ವಾಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net