

ಹೊಸಪೇಟೆ: ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯರ ಸಬಲೀಕರಣಕ್ಕಾಗಿ ಇನ್ನರ್ ವೀಲ್ ಕ್ಲಬ್ ಸದಾ ಮುಂಚೂಣಿಯಲ್ಲಿದ್ದು ಇತರೆ ಕ್ಲಬ್ ಗಳಿಗೆ ಮಾದರಿಯಾಗಿದೆ ಎಂದು ಕ್ಲಬ್‌ನ ಜಿಲ್ಲಾಧ್ಯಕ್ಷೆ ಸುಷ್ಮಾ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಇನ್ನರ್ ವೀಲ್ ಕ್ಲಬ್‌ನಿಂದ ನಗರದ ರೋಟರಿ ಕ್ಲಬ್ ಆವರಣದಲ್ಲಿ ಬಡ ಮಹಿಳೆಯರಿಗಾಗಿ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ವಿತರಿಸಿ ಮಾತನಾಡಿದರು.
ಹಣವಿದ್ದವರೆಲ್ಲ ದಾನಿಗಳಾಗಲ್ಲ, ದಾನ ಮಾಡುವವರಿಗೆ ಹಣವಿರಬೇಕು ಎಂದೇನಿಲ್ಲ ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ಮಾನವೀಯತೆಯ ಗುಣವಿರಬೇಕು. ಮತ್ತು ಸಮಾಜ ಸೇವೆಗೈಯುವ ತುಡಿತವಿರಬೇಕು. ಕೇವಲ ಮಹಿಳೆಯರಿಂದಲೇ ಕೂಡಿರುವ ಇನ್ನರ್ ವೀಲ್ ಕ್ಲಬ್ ಸಮಾಜ ಸೇವೆಗೆ ಸದಾ ಮೇಲಗೈ ಎನಿಸಿದೆ. ಅದರಲ್ಲೂ ಹೊರಗಡೆಯವರಿಂದ ಯಾವುದೇ ದೇಣಿಗೆ ಸಂಗ್ರಹಿಸದೆ ಕ್ಲಬ್ಬಿನ ಸದಸ್ಯರೇ ಹಣ ಹಾಕಿ 10 ಹೊಲಿಗೆ ಯಂತ್ರಗಳನ್ನು ವಿತರಿಸುವ ಮೂಲಕ 10 ಕುಟುಂಬಗಳ ಸಬಲೀಕರಣ ಗೊಳಿಸುವಲ್ಲಿ ಯಶಸ್ವಿಯಾಗಿದ್ದಿರಾ ಎಂದರು.
ಕ್ಲಬ್‌ನ ಅಧ್ಯಕ್ಷೆ ಸುನೀತಾ ಕಿಶೋರ್, ಕಾರ್ಯದರ್ಶಿ ರಾಜೇಶ್ವರಿ ಅರಳಿಹಳ್ಳಿ, ಪ್ರಮುಖರಾದ ಡಾ.ಮಾದವಿ ದೇವಿ, ಶೋಭಾ ಸಿಂದ್ಯಾ, ಮೇಘನಾ ಹಿರೇಮಠ, ಸಂಜನಾ, ನೈಮಿಷಾ ಇತರರಿದ್ದರು.