ಚಿರತೆ ಪ್ರತ್ಯಕ್ಷ ಪ್ರವಾಸಿಗರಲ್ಲಿ ಆತಂಕ

26 MANJU 04
Published on

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಪ್ರವಾಸಿಗರಲ್ಲಿ ಆತಂಕ ಮನೆ ಮಾಡಿದೆ.
ಶ್ರೀ ಕೃಷ್ಣ ದೇವಸ್ಥಾನ ಮುಂದಿನ ಕೃಷ್ಣ ಬಜಾರಿನ ಬಳಿ ಇರುವ ಗುಡ್ಡದ ತುದಿಯಲ್ಲಿ ಗುರುವಾರ ಸಂಜೆ ಕಾಣಿಸಿಕೊಂಡಿದೆ.

ಹಂಪಿ ಪರಿಸರದಲ್ಲಿ ಪದೇ, ಪದೇ ಚಿರತೆ ಕಾಣಿಸಿಕೊಳ್ಳುತ್ತಿರುವುದು ಸ್ಥಳೀಯರು ಸೇರಿದಂತೆ ಪ್ರವಾಸಿಗರಲ್ಲಿ ಭಯದ ವಾತವರಣ ನಿರ್ಮಾಣವಾಗಿದೆ. ಕೂಡಲೇ ಚಿರತೆ ಸೆರೆಗೆ ಅರಣ್ಯ ಇಲಾಖೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net