ಚಿರತೆ ಭಯದಿಂದ ರೈತರಿಗೆ ಮುಕ್ತಿ ನೀಡಿ

IMG_20240917_112621
Published on

ಹೊಸಪೇಟೆ : ಚಿರತೆ ಸೆರೆಹಿಡಿದು ರೈತರಿಗೆ ರಕ್ಷಣೆ ನೀಡಿ ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ತಾಲೂಕಿನ ರಾಯರ ಕೆರೆ, ಜಂಬುನಾಥ ಹಳ್ಳಿ, ರಾಜಾಪುರ ರೈತರಿಂದ ಆರ್.ಎಫ್.ಒ. ಭರತ್‌ಗೆ ಮನವಿ ಸಲ್ಲಿಸಿದರು.

ತಾಲೂಕಿನ ರಾಯರ ಕೆರೆ, ರಾಜಾಪುರ, ಜಂಬುನಾಥ ಹಳ್ಳಿ ವಿಭಾಗದ ರೈತರ ಹೊಲಗಳಲ್ಲಿ ಕಾಡುಪ್ರಾಣಿಗಳ ಕಾಡಾಟ ನಿರಂತರವಾಗಿದೆ. ಅನೇಕ ಸಾವು ನೋವಿನ ಘಟನೆಗಳು ಸಹ ಇಲ್ಲಿ ನಡೆದಿದೆ. ಈ ಹಿಂದೆ ಕಬ್ಬಿನ ಗದ್ದೆಯಲ್ಲಿ ಚಿರತೆ 4 ರಿಂದ 5 ಮರಿಗಳನ್ನು ಬಿಟ್ಟು ಹೋದ ಸಂದರ್ಭದಲ್ಲಿ ಇಲ್ಲಿನ ರೈತರು ಪ್ರಾಣಿಗಳಿಗೆ ತೊಂದರೆಮಾಡದೇ ಇಲಾಖೆಯ ಗಮನಕ್ಕೆ ತಂದು ರಕ್ಷಣೆ ಮಾಡಿದ್ದಾರೆ. ಅದರೆ, ಇತ್ತೀಚೆಗೆ ದಿನಗಳಲ್ಲಿ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿ ಹೊತ್ತೋಯಿದಿದೆ. ಆದ್ದರಿಂದ ಬಿತ್ತನೆ ಮಾಡಿದ ರೈತರು ಹೊಲಗಳಿಗೆ ನೀರು ಹಾಯಿಸುವುದು ಸೇರಿದಂತೆ ಕೃಷಿ ಚಟುವಟಿಕೆಗಳು ಮಾಡಲಿಕ್ಕೆ ಆಗುತ್ತಿಲ್ಲ. ಆದ್ದರಿಂದ ಕೂಡಲೇ ಚಿರತೆಯನ್ನು ಹಿಡಿದು ಮೃಗಾಲಯಕ್ಕೆ ಕಳುಹಿಸಬೇಕು ಇಲ್ಲದಿದ್ದರೆ ರೈತರಿಗೆ ಎಕರೆಗೆ 50 ಸಾವಿರ ನಷ್ಟ ಪರಿಹಾರವನ್ನು ಕೊಡಬೇಕು. ಮತ್ತು ಅನಾಹುತಗಳಿಗೆ ತಾವೇ ಹೊಣೆಗಾರಿಕೆ ಆಗಬೇಕಾಗುತ್ತದೆ. ನಗರ ಪ್ರದೇಶಕ್ಕೆ ಮತ್ತು ಗ್ರಾಮೀಣಕ್ಕೆ ಹೊಂದಿಕೊAಡಿರುವ ಸಾಗುವಳಿ ಭೂಮಿಗೆ ಅರಣ್ಯ ಭೂಮಿಕಾಯ್ದೆಯಂತೆ ಸಾಗುವಳಿ ಮಾಡುವ ರೈತರಿಗೆ ಪಟ್ಟಾ ನೀಡಲು ಕಂದಾಯ ಇಲಾಖೆಗೆ ವರದಿ ಸಲ್ಲಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಯಲ್ಲಲಿಂಗ, ರೈತರಾದ ವೆಂಕೊಬ ಪೂಜಾರ್, ಕಟ್ಟಗಿ ಕರಿಹನುಮ, ಮರಡಿ ಬಸವ, ಪೂಜಾರಿ ದುರುಗಪ್ಪ, ಕಲ್ಲಗುಡಿ ಮಂಜುನಾಥ, ಕನಕಪ್ಪ, ಜಂಬಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net