

ಹೊಸಪೇಟೆ: ಕನ್ನಡ ವಿವಿ ನಿರ್ವಹಣೆಗೆ ಅನುದಾನದ ಅವಶ್ಯಕತೆಯಿದ್ದು, ಸರ್ಕಾರ ಗಮನ ಹರಿಸಲಿ ಎಂದು ಕನ್ನಡ ವಿವಿ ಕುಲಪತಿ ಡಾ.ಪರಮಶಿವಮೂರ್ತಿ ಎಂದು ಹೇಳಿದರು.
ಕನ್ನಡ ವಿವಿಯ ಸಿಂಡಿಕೇಟ್ ಸಭೆ ನಂತರ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕನ್ನಡ ವಿವಿ ಎಲ್ಲ ವಿವಿಗಳಂತೆಯಲ್ಲ. ಸಂಶೋಧನೆಗಾಗಿ ಸ್ಥಾಪಿತವಾಗಿರುವ ವಿವಿಯಾಗಿದ್ದು, ಇಲ್ಲಿ ಯಾವುದೇ ಆಂಕರಿಕ ಆದಾಯವಿಲ್ಲ. ಆದ್ದರಿಂದ ಸರ್ಕಾರವೇ ನೀಡುವ ಅನುದಾನದ ಮೇಲೆ ವಿವಿ ನಡೆಯಬೇಕಿದೆ ಎಂದರು.
ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ನೇತೃತ್ವದಲ್ಲಿ ಸಿಂಡಿಕೇಟ್ ಸಭೆ ನಡೆಸಲಾಗಿದೆ. ಕನ್ನಡ ವಿವಿ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ ಸಿಎಂ ಬಳಿ ನಿಯೋಗ ಹೋಗಲು ತಿರ್ಮಾನಿಸಲಾಗಿದೆ. ಸಿಎಂ ಅನುದಾನ ನೀಡುವ ಭರವಸೆಯಿದೆ. ಅನುದಾನ ನೀಡಿದರೆ, ಬಾಕಿ ಇರುವ ವೇತನ ಹಾಗೂ ಇತರೆ ನಿರ್ವಹಣೆ ಕಾರ್ಯ ನಡೆಸಲಾಗುತ್ತದೆ ಎಂದರು.
ಸAಸದ ಈ.ತುಕಾರಾಂ ಅವರಿಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದೇವೆ. ಆದರೆ, ವಿವಿ ಅನುದಾನದ ಬಗ್ಗೆ ಮಾತನಾಡಿರಲಿಲ್ಲ. ಸಿಎಂ, ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಶಾಸಕ ಎಚ್.ಆರ್.ಗವಿಯಪ್ಪ ಅವರ ಜತೆ ಸಾಕಷ್ಟು ಮನವಿ ಮಾಡಿದ್ದೇವೆ. ವಿವಿಗೆ ಅನುದಾನಕ್ಕಾಗಿ ಸಂಸದರಿಗೆ ಒಮ್ಮ ಭೇಟಿಯಾಗಿ ಮನವಿ ಮಾಡುತ್ತೇವೆ ಎಂದರು.