ಶಿಲ್ಪಕಲೆಯಲ್ಲಿ ಜಕಣಾಚಾರಿ ಕೊಡುಗೆ ಅಪಾರ

01 MANJU 07
Published on

ಹೊಸಪೇಟೆ: ದೇಶದ ಶಿಲ್ಪಕಲೆ ಶ್ರೀಮಂತಿಕೆಯಲ್ಲಿ ಅಮರ ಶಿಲ್ಪಿ ಜಕಣಾಚಾರಿಯವರು ಅದ್ಭುತ ಕೊಡುಗೆ ನೀಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಬೇಲೂರು, ಹಳೇಬೀಡು, ಸೋಮನಾಥಪುರದಲ್ಲಿ ಶಿಲ್ಪಕಲೆಗಳು ವಿಶ್ವಕರ್ಮರ ಪ್ರಸ್ತುತೆಯನ್ನು ಬಿಂಬಿಸುತ್ತವೆ. ಜಕಣಾಚಾರಿಯವರು ಅವರ ಜೀವನವನ್ನು ಶಿಲ್ಪಕಲೆಗೆ ಮುಡುಪಾಗಿಟ್ಟಿದ್ದರು. ಅವರ ಕೆತ್ತನೆಯ ಚೆನ್ನಕೇಶವ ದೇವಾಲಯ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿವೆ. ಅಧುನಿಕ ಯುಗದಲ್ಲಿ ಶಿಲ್ಪಕಲೆಗಳು ನಶಿಸುತ್ತಿವೆ. ಅಮರಶಿಲ್ಪಿ ಜಕಣಾಚಾರಿಯವರ ಪರಂಪರೆಯನ್ನು ಎಲ್ಲರೂ ಪೋಷಿಸುವ ಅಗತ್ಯವಿದೆ. ವಿಶ್ವಕರ್ಮರ ಶಿಲ್ಪಕಲೆಗಳು ಅಮರವಾಗಿರಲಿವೆ. ಈ ನಿಟ್ಟಿನಲ್ಲಿ ಜಕಣಾಚಾರಿಯವರನ್ನು ಶಿಲ್ಪಕಲೆಯ ಕುಶಲತೆಯನ್ನು ಸ್ಮರಿಸುವ ಅಗತ್ಯವಿದೆ ಎಂದರು.

ಎಡಿಸಿ ಇ.ಬಾಲಕೃಷ್ಣಪ್ಪ, ಜಿಪಂನ ಉಪಕಾರ್ಯದರ್ಶಿ ಭೀಮಪ್ಪ ಲಾಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣನವರ, ಡಿಚಿ ಕಚೇರಿ ತಹಸೀಲ್ದಾರ್ ಮೇಘ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net