ಒತ್ತುವರಿ ರುದ್ರಭೂಮಿ ಜಮೀನು ತೆರವುಗೊಳಿಸಿ

14 MANJU 03
Published on

ಮರಿಯಮ್ಮನಹಳ್ಳಿ: ಒತ್ತುವರಿಯಾಗುತ್ತಿರುವ ರುದ್ರಭೂಮಿಗೆ ಜಮೀನು ತೆರವುಗೊಳಿಸಿ ಅಭಿವೃದ್ಧಿ ಪಡಿಸಬೇಕು ಎಂದು ಒತ್ತಾಯಿಸಿ ಪಟ್ಟಣದ 14ನೇ ವಾರ್ಡಿನ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ಪಟ್ಟಣದ 122/3 ರ ಸರ್ವೇ ನಂಬರ್ ಜಮೀನಿನಲ್ಲಿ ಪೂರ್ವಜರ ಕಾಲದಿಂದ ಶವಸಂಸ್ಕಾರ ನಡೆಸಲಾಗುತ್ತಿದೆ. ಇಲಾಖಾಧಿಕಾರಿಗಳಿಗೆ ಈ ಭೂಮಿಯನ್ನೂ ರುದ್ರಭೂಮಿಗೆ ಮೀಸಲಿಡುವಂತೆ ಹಲವು ಬಾರಿ ಮನವಿ ಮಾಡಿದರೂ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. 2009ರಲ್ಲಿ ತಾಲೂಕು ಸರ್ವೇಯರ್ ಸರ್ವೇಕಾರ್ಯ ನಡೆಸಿ 4 ಎಕರೆ ಜಾಗವನ್ನು ಮಿಸಲಿರಿಸಲು ವರದಿ ಮಾಡಿದ್ದರು. ನಂತರ ದಿನಗಳಲ್ಲಿ ಅದರ ಬಗ್ಗೆ ಏನಾಯಿತೆಂದು ತಿಳಿಯದಾಗಿದೆ. ಸ್ಮಶಾನಕ್ಕೆ ಯಾವುದೇ ಧಾಖಲೆ ಇಲ್ಲದಿರುವುದರಿಂದ ಕೆಲವರು ಅದರ ಪಕ್ಕದಲ್ಲೇ ಇರುವ ಜಾಗದಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಶವಸಂಸ್ಕಾರ ನಡೆಸಲು ಸ್ಥಳವಕಾಶ ಇಲ್ಲದಂತಾಗುತ್ತದೆ ಎಂಬುದು ನಮ್ಮ ಆತಂಕ ಹೀಗಾಗಿದೆ. ಮತ್ತೊಮ್ಮೆ ಸರ್ವೇ ನಡೆಸಿ ಸ್ಮಶಾನ ಒತ್ತುವರಿಯಾಗದಂತೆ ಸ್ಥಳ ನಿಗಧಿ ಮಾಡಬೇಕು ಎಂದು ಆಗ್ರಹಿಸಿದರು.

ಅಮೃತ್2 ಯೋಜನೆಯ ಶುದ್ಧ ಕುಡಿವ ನೀರಿನ ಘಟಕದ ಕಾಮಗಾರಿ ಪೂರ್ವಜರ ಸಮಾದಿಗಳ ಮೇಲೆ ನಡೆಯುತ್ತಿದೆ. ಅಂದಾಜು 1.5 ಎಕರೆಯಷ್ಟು ಪ್ರದೇಶದಲ್ಲಿ 10 ರಿಂದ 15ಅಡಿ ಎತ್ತರದಷ್ಟು ಮಣ್ಣು, ಕಲ್ಲುಗಳನ್ನು ಸಮಾದಿಗಳ ಮೇಲೆ ಹಾಕಿ ನಾಶಮಾಡಿದ್ದಾರೆ. ಇದರಿಂದ ನಮಗೆ ಮಾನಸಿಕ ನೋವಾಗಿದೆ. ಕೂಡಲೇ ಕಾಮಗಾರಿಯ ಗುತ್ತಿಗೆದಾರರು, ಸಮಾದಿಗಳಿಗೆ ಹಾನಿಯಾಗದಂತೆ ಅದನ್ನು ತೆರವುಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಬೇಕು. ಇಲ್ಲವಾದಲ್ಲಿ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು.

ಪ.ಪಂ. ಸದಸ್ಯ ಮರಡಿ ಸುರೇಶ, ಪ್ರಮುಖರಾದ ಎಂ.ರಾಮಾAಜಿನೇಯ, ನಾಗರಾಜ, ತಳವಾರ್ ಹನುಮಂತಪ್ಪ, ಬಿ.ರಾಮಪ್ಪ, ಬಿ.ವೆಂಕಟೇಶ್, ಎಂ.ಅAಜಿನಪ್ಪ, ಬಿ.ಗಾಳೆಪ್ಪ, ಟಿ.ಹನುಮಂತ, ಗಂಗಾಧರ, ತಳವಾರ ದುರುಗಪ್ಪ, ದುರುಗಪ್ಪ, ರಾಮಪ್ಪ, ರವಿ, ಹರೀಶ್, ಸೋಮಪ್ಪ, ಲಕ್ಷ್ಮೀದೇವಿ, ಶಾರದಮ್ಮ, ಹುಲಿಗೆಮ್ಮ, ಅಂಜಿನಮ್ಮ, ಸೋಮಕ್ಕ ರೇಣುಕಮ್ಮ, ನಿಂಗಮ್ಮ, ಹಂಪಮ್ಮ, ದುರುಗಮ್ಮ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net