

ಹೊಸಪೇಟೆ : ಒಂದು ಸಮುದಾಯ ಓಲೈಕೆಗಾಗಿ ಜಾತಿ ಗಣತಿ ಮಾಡೋದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಹೂವಿನ ಹಡಗಲಿ ಶಾಸಕ ಕೃಷ್ಣ ನಾಯ್ಕ ಆಕ್ರೋಶ ಹೊರಹಾಕಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಾತಿ ಗಣತಿ ವೈಜ್ಞಾನಿಕವಾಗಿ ಇಲ್ಲ. ಜಾತಿ ಗಣತಿ ಜಾರಿ ಮಾಡೋದಕ್ಕೆ ಕಾಂಗ್ರೆಸ್ ಪಕ್ಷದವರೇ ವಿರೋಧ ಮಾಡುತ್ತಿದ್ದಾರೆ. 2017-18ರಲ್ಲಿಯೂ ಇದೇ ರೀತಿ ಮಾಡೋದಕ್ಕೆ ಹೋಗಿ ಕೈಸುಟ್ಟುಕೊಂಡಿದ್ದಾರೆ. ಈಗ ಮತ್ತೇ ಜಾತಿ ಓಲೈಕೆಗೆ ಮುಂದಾಗಿದ್ದಾರೆ. ಇದು ಸಕ್ಸಸ್ ಆಗೋದಿಲ್ಲ ಎಂದರು.