

ಹೊಸಪೇಟೆ: ಮೋಟಾರ್ ಕ್ಯಾಬ್ ಮತ್ತು ಮ್ಯಾಕ್ಸಿಕ್ಯಾಪ್ ವಾಹನಗಳಿಗೆ ಪ್ಯಾನಿಕ್ ಬಟನ್ ಅಳವಡಿಕೆ ಆದೇಶ ಹಿಂಪಡೆಯುವAತೆ ಒತ್ತಾಯಿಸಿ ತಾಲೂಕು ಸಾರಿಗೆ ಕಾರ್ಮಿಕರ ಸಂಘಗಳ ಒಕ್ಕೂಟದಿಂದ ನಗರದ ಪ್ರಾದೇಶಿಕ ಸಾರಿಗೆ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಯಿತು.
ರಾಜ್ಯದಲ್ಲಿ ಅಂದಾಜು 8 ಲಕ್ಷಕ್ಕೂ ಅಧಿಕ ಮೋಟಾರ್ ಕ್ಯಾಬ್ ಮತ್ತು ಮ್ಯಾಕ್ಸ್ ಕ್ಯಾಪ್ ವಾಹನಗಳಿವೆ. ಪ್ಯಾನಿಕ್ ಬಟನ್ ಅಳವಡಿಸಬೇಕೆಂಬ ಸರ್ಕಾರದ ಆದೇಶದಿಂದ ಮಧ್ಯಮ ವರ್ಗದ ಜನರಿಗೆ ನುಂಗಲಾರದ ತುತ್ತಾಗಿದೆ. ಪ್ಯಾನಿಕ್ ಬಟನ್ ಅಳವಡಿಸಲು ಸಂಬAಧಪಟ್ಟ ವ್ಯಕ್ತಿಗಳು 12.5 ದಿಂದ 17.5 ಸಾವಿರ ರೂ. ವರೆಗೆ ಹಣ ಪಡೆಯುತ್ತಿದ್ದಾರೆ. ಅಲ್ಲದೆ ಸಾರಿಗೆ ಇಲಾಖೆ ತಂತ್ರಾAಶದಲ್ಲಿ ಪ್ಯಾನಿಕ್ ಬಟನ್ ಅಳವಡಿಸಿರುವ ಕುರಿತು ಸರ್ಟಿಫಿಕೇಟ್ ಬರುತ್ತಿಲ್ಲ. ಮತ್ತು ಇದರ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿಯಿಲ್ಲ. ವಾಹನಗಳಿಗೆ ಪ್ಯಾನಿಕ್ ಬಟನ್ , ಎಚ್.ಎಸ್.ಆರ್.ಪಿ. ನಂಬರ್ ಪ್ಲೇಟ್ ಅಳವಡಿಸುವುದೋ ತಿಳಿಯದೆ ಅತಂತ್ರ ಸ್ಥಿತಿಯಲ್ಲಿ ಚಾಲಕ ಹಾಗೂ ಮಾಲೀಕರಿದ್ದಾರೆ. ಆದ್ದರಿಂದ ವಾಹನಗಳಿಗೆ ಅರ್ಹತ ಪ್ರಮಾಣ ಪತ್ರ ನವೀಕರಣ ಮತ್ತು ಹೊಸ ವಾಹನ ನೊಂದಣಿ ಸಂದರ್ಭದಲ್ಲಿ ತೊಂದರೆಯಾಗದAತೆ ಈ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ವೈ.ರಾಮಚಂದ್ರ ಬಾಬು, ಕೆ.ಎಂ.ಸAತೋಷ್ ಕುಮಾರ್, ಸಿ.ಕೃಷ್ಣ, ನಾಗವಾರ ಪ್ರಸಾದ್, ಹೊನ್ನೂರು ಸ್ವಾಮಿ , ಕೆ.ಎಂ.ಕೊಟ್ರೇಶ ಚನ್ನಬಸವನ ಗೌಡ, ಜಾವಿದ್ ಬಾಷಾ,ಚೇತನ್ ಕುಮಾರ್, ವೆಂಕಟೇಶ್ ಕುಲಕರ್ಣಿ, ಮಂಜು ನಾಯಕ ಗಣೇಶ್ ಇತರರಿದ್ದರು.