ಹೊಟೇಲ್ ಉದ್ಯಮಿ ಮೇಲೆ ಇಡಿ ದಾಳಿ

16 MANJU 03
Published on

ಹೊಸಪೇಟೆ: ಅಕ್ರಮ ಗಣಿಗಾರಿಕೆ ಪ್ರಕರಣಗಳಿಗೆ ಸಂಬAಧಿಸಿದAತೆ ನಗರದಲ್ಲಿ ಹೊಟೇಲ್ ಉದ್ಯಮಿ ಶ್ರೀನಿವಾಸ್ ರಾವ್( ಸೀನಾಬಾಬು ) ಮೆನೆ ಹಾಗೂ ಕಚೇರಿ ಮೇಲೆ ಇಡಿ ಅಧಿಕಾರಿಗಳು ಗುರುವಾರ ದಾಳಿ ನಡೆಸಿ, ದಾಖಲೆಗಳಿಗಾಗಿ ಹುಡುಕಾಟ ನಡೆಸಿದರು.

ನಗರದಲ್ಲಿ ಇಡಿ ತಂಡ ಶ್ರೀನಿವಾಸ್ ರಾವ್(ಸೀನಾಬಾಬು) ಎರಡು ಮನೆ, ಕಚೇರಿ ಎರಡು ಕಡೆ ದಾಳಿ ನಡೆಸಿದವು. 2009-10ರಲ್ಲಿ ಅಕ್ರಮ ಗಣಿಗಾರಿಕೆ ನಡರಸಿದರು ಹಾಗೂ ಇತರೆ ಬೇನಾಮಿ ಆಸ್ತಿ ಮಾಡಿರುವ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ.

ವಿನಾಯಕನಗರ, ಬಸವೇಶ್ವರ ಬಡಾವಣೆಯ ಮನೆಯ, ಸ್ಟೇಷನ್ ರಸ್ತೆಯಲ್ಲಿನ ಹೊಟೇಲ್ ಹಾಗೂ ಕಚೇರಿಯಲ್ಲಿ ಇಡಿ ಅಧಿಕಾರಿಗಳ ತೀವ್ರ ಶೋಧ ನಡೆಸಿದರು. ಗಣಿ ಗುತ್ತಿಗೆ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಸೀನಬಾಬು ಹಲವು ಕಡೆ ಆಸ್ತಿ ಮಾಡಿದ್ದಾರೆ. ಪ್ರೀಯದರ್ಶನಿ ಹೋಟೆಲ್ ನ ಲೆಕ್ಕಪತ್ರ ವ್ಯವಹಾರದಲ್ಲಿ ವ್ಯತ್ಯಾಸ ಇರೋ ಕಾರಣ ದಾಳಿ ನಡೆದಿದೆ ಎನ್ನಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net