ಬಸ್ ನಿಲ್ದಾಣದಲ್ಲಿ ಮತದಾನ ಜಾಗೃತಿ

Awareness
ಹೊಸಪೇಟೆಯ ಬಸ್ ನಿಲ್ದಾಣದಲ್ಲಿ ಶುಕ್ರವಾರ ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ನಡೆಯಿತು.
Published on

ಹೊಸಪೇಟೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ, ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿಯಿಂದ ಶುಕ್ರವಾರ ಹೊಸಪೇಟೆಯ ಬಸ್ ನಿಲ್ದಾಣದಲ್ಲಿ ಮತದಾನ ಜಾಗೃತಿ ನಡೆಯಿತು.

ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ಸದಾಶಿವ ಬಿ.ಪ್ರಭು ಮಾತನಾಡಿ, ಮತದಾನವೆಂಬುದು ಪವಿತ್ರವಾದ ಸಂವಿಧಾನ ಬದ್ದವಾದ ಹಕ್ಕಾಗಿದೆ. ಮೇ 07ರಂದು ನಡೆಯುವ ಮತದಾನದಲ್ಲಿ ಭಾಗವಹಿಸಿ ತಪ್ಪದೇ ಕಡ್ಡಾಯವಾಗಿ ಮತದಾನ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನವು ಅತ್ಯಂತ ಪವಿತ್ರವಾಗಿದೆ. ಯಾವುದೇ ಮತದಾರರು ಆಸೆ ಆಮೀಷಗಳಿಗೆ ಒಳಗಾಗದೇ, ತಮ್ಮ ಮತವನ್ನು ಮಾರಿಕೊಳ್ಳದೆ, ಪ್ರಜಾಪ್ರಭುತ್ವದ ಬದ್ರ ಬುನಾದಿಗಾಗಿ ಶ್ರೇಷ್ಟ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಪ್ರತಿಯೊಂದು ಮತವು ಸಹ ಅಮೂಲ್ಯವಾಗಿದ್ದು, ನೈತಿಕ ಹಾಗೂ ಕಡ್ಡಾಯ ಮತದಾನ ಮಾಡಬೇಕು. ಮತದಾನದಿಂದ ಯಾರು ಸಹ ಹೊರಗುಳಿಯದೆ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಸ್ವಯಂ ವಿವೇಚನೆಯಿಂದ ಮತ ಚಲಾಯಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಡೊಳ್ಳು ಕುಣಿತದವರು, ಗೊಂಬೆ ವೇಷಧಾರಿಗಳು, ಮತದಾನ ಜಾಗೃತಿ ಫಲಕಗಳನ್ನು ಹಿಡಿದ ಮಾಹಿಳೆಯರು ಮತ್ತು ಕೆಎಸ್‌ಆರ್‌ಟಿಸಿಯ ಬಸ್ ಡ್ರೆöÊವರ್‌ಗಳು, ನಿರ್ವಾಹಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಜಾಗೃತಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ತಂದರು.

ಜಿಪಂ ಮುಖ್ಯ ಯೋಜನಾಧಿಕಾರಿ ಜೆ.ಎಂ.ಅನ್ನದಾನಸ್ವಾಮಿ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ಕೆಎಸ್‌ಆರ್‌ಟಿಸಿಯ ವಿಭಾಗಿಯ ಸಂಚಾರಿ ಅಧಿಕಾರಿ ರಾಜಶೇಖರ, ನಗರಸಭೆಯ ಪೌರಾಯುಕ್ತ ಚಂದ್ರಪ್ಪ, ತಾಪಂ ಇಒ ಆರ್.ಹರೀಶ್, ಯೋಜನಾ ಅಂದಾಜು ಮೌಲ್ಯಮಾಪನಾಧಿಕಾರಿ ಎನ್.ಕೆ.ಪತ್ರಿಬಸಪ್ಪ, ಅಧೀಕ್ಷಕ ಲೋಕೇಶ್ ಬಾಬು, ಜಿಲ್ಲಾ ಐಇಸಿ ಫಾಜಿಲ್, ತಾಲೂಕು ಐಇಸಿ ನಾಗರಾಜ ಇತರರಿದ್ದರು. ಜಿಪಂ ಮುಖ್ಯ ಯೋಜನಾಧಿಕಾರಿ ಜೆ.ಎಂ.ಅನ್ನದಾನಸ್ವಾಮಿ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ಕೆಎಸ್‌ಆರ್‌ಟಿಸಿಯ ವಿಭಾಗಿಯ ಸಂಚಾರಿ ಅಧಿಕಾರಿ ರಾಜಶೇಖರ, ನಗರಸಭೆಯ ಪೌರಾಯುಕ್ತ ಚಂದ್ರಪ್ಪ, ತಾಪಂ ಇಒ ಆರ್.ಹರೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net