ಕಳ್ಳತನ ಪ್ರಯಾಣಿಕರಿಗೆ ತಪಾಸಣೆ

22 MANJU 03
Published on

ಹೊಸಪೇಟೆ: ಕೆಕೆಆರ್‌ಟಿಸಿ ಬಸ್‌ನಲ್ಲಿ 9 ತೊಲೆ ಬಂಗಾರ ಕಳ್ಳತನವಾಗಿದೆ ಎಂದು ಬಸ್ ಚಾಲಕ ಬಸ್ಸನ್ನು ಇಲ್ಲಿ ಪಟ್ಟಣ ಠಾಣೆಯ ಆವರಣದಲ್ಲಿ ತಂದು ಪ್ರಯಾಣಿಕರ ತಪಾಸಣೆ ನಡೆಸಿದ ಘಟನೆ ಶನಿವಾರ ನಡೆದಿದೆ.

ನಗರದಿಂದ ಯಲಬುರ್ಗಕ್ಕೆ ತೆರಳುತ್ತಿದ್ದ ಬಸ್ ಮುನಿರಾಬಾದ್ ತಲುಪುತ್ತಿದ್ದಂತೆಯೇ ತನ್ನ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನವನ್ನು ಸಹ ಪ್ರಯಾಣಿಕರೇ ಕಳವು ಮಾಡಿರಬೇಕು ಎಂದು ತಾಲೂಕಿನ ಗೊಲ್ಲರಹಳ್ಳಿಯ ನಿವಾಸಿ ಅಂಬಮ್ಮ ಎಂಬುವವರು ದೂರಿದ್ದರು. ಅತ್ತು, ಗೋಳಾಡಿದ್ದರಿಂದ ಕಂಗೆಟ್ಟ ಬಸ್ ಚಾಲಕ ಮತ್ತು ನಿರ್ವಾಹಕರು, ಬಸ್ ಅನ್ನು ವಾಪಸ್ ಇಲ್ಲಿನ ಪೊಲೀಸ್ ಠಾಣೆಯತ್ತ ತಂದು ಅಂದಾಜು 80 ಮಂದಿ ಪ್ರಯಾಣಿಕರನ್ನು ಪರಿಶೀಲಿಸಿದರೂ, ಯಾರ ಬಳಿಯೂ ಕಳವಾದ ಚಿನ್ನ ಪತ್ತೆಯಾಗಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net