ಬಸ್ ನಿಲ್ದಾಣ ಅಧಿಕಾರಿಗೆ ಜಿಲ್ಲಾಧಿಕಾರಿ ತರಾಟೆ

27 MANJU 12
Published on

ಹೊಸಪೇಟೆ: ಇಲ್ಲಿನ ಕೇಂದ್ರ ಬಸ್ ನಿಲ್ದಾಣಕ್ಕೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ, ಅವ್ಯವಸ್ಥೆ ಕಂಡು ಡಿಟಿಒ ರಾಜಶೇಖರ್ ವಾಜಂತ್ರಿಗೆ ತರಾಟೆಗೆ ತಗೆದುಕೊಂಡರು.

ಬಸ್ ನಿಲ್ದಾಣದಲ್ಲಿನ ತಿಂಡಿ, ತಿನಿಸು ಅಂಗಡಿಗಳ ಆಹಾರ ಪದಾರ್ಥಗಳ ಪರಿಶೀಲಿಸಿದರು. ಕುಡಿವ ನೀರಿನ ಘಟಕವನ್ನು ಪರಿಶೀಲಿಸಿದರು. ಅಲ್ಲಿನ ಸ್ವಚ್ಛತೆ ಇಲ್ಲದೇ ಇರುವುದನ್ನು ಕಂಡ ಜಿಲ್ಲಾಧಿಕಾರಿ ಬಸ್ ನಿಲ್ದಾಣದ ಡಿಟಿಓಗೆ ಇದೇ ನೀರು ನೀರು ಕುಡಿರಿ ಎಂದು ಕುಡಿಸಿದರು.

ಶೌಚಗೃಹವೇ 10 ರೂ. ಕೊಟ್ಟು ಮಹಿಳೆಯರು ನಮ್ಮ ಎದುರಿಗೆ ಹೋದರಲ್ಲ ಏನಂತ್ತಿರಿ? ಅವರಿಗೆ ನೊಟೀಸ್ ನೀಡಿ ಎಂದು ನಿಲ್ದಾಣದ ಬದಲಾವಣೆ ಮಾಡಿ ಎಂದು ಮೂರು ಕಡೆಯ ಶೌಚಗೃಹಳಿಗೆ ಪರಿಶೀಲನೆ ಮಾಡಿದರು. ಬಸ್ ನಿಲ್ದಾಣದಲ್ಲಿ ಕಳ್ಳತನ ಜಾಗೃತಿ ನಡೆಸುವ ಕುರಿತು ಮೈಕ್ ವ್ಯವಸ್ಥೆ ಮಾಡಿ. ನಂತರ ನಿಲ್ದಾಣದ ಹೊಟೇಲ್ ಅಡುಗೆ ಮನೆಗೆ ಭೇಟಿ ನೀಡಿ ಬಳಸುವ ಎಣ್ಣೆ ಯಾವುದು ಎಂದು ವಿಚಾರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net