ಬಸ್‌ಪಾಸ್ ನವೀಕರಣಕ್ಕೆ ಅವಕಾಶ

Published on

ಹೊಸಪೇಟೆ : ಅಂಗವಿಕಲರ ಹಾಲಿ ಬಸ್‌ಪಾಸ್‌ಗಳ ಮಾನ್ಯತೆಯನ್ನು 2025ರ ಫೆ.28 ರವರೆಗೆ ಅವಧಿ ವಿಸ್ತರಿಸಿ ನವೀಕರಣಕ್ಕೆ ಅವಕಾಶ ನೀಡಲಾಗಿದೆ ಎಂದು ಕಲ್ಯಾಣ ರಸ್ತೆ ಸಾರಿಗೆ ಹೊಸಪೇಟೆ ವಿಭಾಗದ ವಿಭಾಗೀಯ ನಿಯಂತ್ರಕ ತಿಮ್ಮಾರೆಡ್ಡಿ ಹೀರಾ ತಿಳಿಸಿದ್ದಾರೆ.

ಅಂಗವಿಕಲರ ರಿಯಾಯಿತಿ ಬಸ್ ಪಾಸ್‌ಗಳನ್ನು ಸೇವಾ ಸಿಂಧು ಪೋರ್ಟ್ಲ್ ಮೂಲಕ ಅರ್ಜಿ ಸಲ್ಲಿಸಿ ನವೀಕರಿಸಿಕೊಳ್ಳಲು ಸಾಕಾಷ್ಟು ಕಾಲಾವಕಾಶ ನೀಡುವ ಉದ್ದೇಶದಿಂದ ವಿತರಿಸಲಾಗಿರುವ ಮತ್ತು ಡಿ.31 ರವರೆಗಿದ್ದ ಮಾನ್ಯತೆಯ ಅವಧಿಯನ್ನು ಫೆ.28 ರವರೆಗೆ ವಿಸ್ತರಣೆ ಮಾಡಿದ್ದು ಪಾಸ್ ತೋರಿಸಿ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net