

ಹೂವಿನಹಡಗಲಿ : ಸಾರಿಗೆ ಇಲಾಖೆಯಲ್ಲಿ ಸುದೀ ರ್ಘ 38 ವರ್ಷಗಳ ಚಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತಿಹೊಂದಿದ ಚಾಲಕ ಕೆ. ಪ್ರಭಾಕರ್ ಅವರನ್ನು ಹೂವಿನಹಡಗಲಿ ಸಾರಿಗೆ ಘಟಕದ ಸಿಬ್ಬಂದಿ ಗುರುವಾರ ಆತ್ಮೀಯವಾಗಿ ಸನ್ಮಾನಿಸಿ, ಬಿಳ್ಕೊಡಲಾಯಿತು.
ವಿಜಯನಗರ ಜಿಲ್ಲೆ ಹೊಸಪೇಟೆ ವಿಭಾಗದ ಹೂವಿನಹಡಗಲಿ ಘಟಕದಲ್ಲಿ ಸಾರಿಗೆ ಬಸ್ ಚಾಲಕರಾಗಿ ಸೇವೆಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಚಾಲಕ ಕೆ.ಪ್ರಭಾಕರ್ ಅವರನ್ನು ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿ ಆತ್ಮೀಯವಾಗಿ ಸನ್ಮಾನಿಸಿ ಬಿಳ್ಕೊಟ್ಟರು. ಚಾಲಕರ ಸೇವಾ ಅವಧಿಯಲ್ಲಿ ಯಾವುದೇ ಅಪಘಾತ ಇಲ್ಲದೆ ಅಪಘಾತ ರಹಿತ ಚಾಲಕರಾಗಿ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿದ ಸಾರಿಗೆ ಅಧಿಕಾರಿಗಳು ಮತ್ತು ಸಾರಿಗೆ ಬಸ್ ರೂಪದ ಕೇಕ್ ಕತ್ತರಿಸಿ ಸಂಭ್ರಮಿಸಿ, ಭಾವುಕ ಬೀಳ್ಕೊಡುಗೆ ನೀಡಿದರು.
ಸೇವಾ ಅವಧಿಯ ಕೊನೆಯ ದಿನದಂದು ಕುಟುಂಬ ವರ್ಗದವರೊಂದಿಗೆ ತಮ್ಮ ಮನೆಯವರೆಗೂ ಸಾರಿಗೆ ವಾಹನ ಚಲಾಯಿಸಿದರು. ಇದೇ ಸಂದರ್ಭದಲ್ಲಿ ಕೆ.ಪ್ರಭಾಕರ್ ದಂಪತಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಸಾರಿಗೆ ಇಲಾಖೆಯಿಂದ ಅಪಘಾತ ರಹಿತ ಚಾಲಕ ಎಂಬ ಪ್ರಶಸ್ತಿ ಹಾಗೂ ಸುರಕ್ಷಿತ ಮತ್ತು ಶಿಸ್ತಿನ ಚಾಲನೆಗೆ ಬೆಳ್ಳಿ ಪದಕ ಪಡೆದಿದ್ದಾರೆ.