ಬಿಲ್ಡ್ ಟೆಕ್ ಬೃಹತ್ ವಸ್ತು ಪ್ರದರ್ಶನ ಆರಂಭ

13 MANJU 05
Published on

ಹೊಸಪೇಟೆ: ಸರ್ ಎಂ.ವಿಶ್ವೇಶ್ವರಯ್ಯ ಜನ್ಮ ದಿನಾಚಾರಣೆ ನಿಮಿತ್ತ ಅಸೋಸಿಯೇಷನ್ ಆಫ್ ಕನ್ಸೆಟಿಂಗ್ ಸಿವಿಲ್ ಇಂಜಿನಿರ‍್ರ್ಸ್ ಅಂಡ್ ಆರ್ಕಿಟೆಕ್ಚರ್ ಮತ್ತು ಯುಎಸ್ ಕಮ್ಯೂನಿಕೇಶನ್ಸ್ನಿಂದ ನಗರದ ಖಾಸಗಿ ಹೊಟೇಲ್‌ನಲ್ಲಿ ಶುಕ್ರವಾರದಿಂದ ಆಯೋಜಿಸಲಾಗಿರುವ ಮೂರು ದಿನಗಳ ಬಿಲ್ಡ್ ಟೆಕ್ ಬೃಹತ್ ವಸ್ತು ಪ್ರದರ್ಶನ ಶುಕ್ರವಾರ ಆರಂಭವಾಯಿತು.

ಶಾಸಕ ಎಚ್.ಆರ್.ಗವಿಯಪ್ಪ ಮಾತನಾಡಿ, ಸಿವಿಲ್ ಇಂಜಿನಿಯರ್ಸ್ ಬಿಲ್ಡಿಂಗ್ ನ ಡಾಕ್ಟರ್ಸ್ ಇದ್ದಂತೆ ಇಲ್ಲಿ ಅನಾವರಣೆಗೊಂಡಿರುವ ಕಟ್ಟಡ ಸಾಮಗ್ರಿಗಳು ಮನೆ ಕಟ್ಟುವವರಿಗಾಗಿ ಯೋಗ್ಯ ಮತ್ತು ಉತ್ಕೃಷ್ಟ ಗುಣಮಟ್ಟವುಳ್ಳದ್ದಾಗಿದೆ ಎದರು.

ಇಂಜಿನಿಯರ್ಸ ಸಂಘದ ಅಧ್ಯಕ್ಷ ಆರ್ಕಿಟೆಕ್ಟ್ ಬಿ.ಶ್ರೀಪಾದ ಮಾತನಾಡಿ, ಈ ವಸ್ತು ಪ್ರದರ್ಶನ ಭಾನುವಾರದವರೆಗೆ ನಡೆಯಲಿದೆ. ಈ ಪ್ರದರ್ಶನದಲ್ಲಿ ಹಲವು ಕಂಪನಿಗಳು ಭಾಗವಹಿಸಿದ್ದು, ಅಧುನಿಕ ತಂತ್ರಜ್ಞಾನ ಒಳಗೊಂಡ ಕಟ್ಟಡ ಸಾಮಗ್ರಿಗಳ ಮತ್ತು ಗೃಹ ಅಲಂಕಾರ ವಸ್ತುಗಳ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಉತ್ಪಾದಕ ಕಂಪನಿಗಳು ತಮ್ಮ ವಸ್ತುಗಳನ್ನು ಪ್ರದರ್ಶನಕ್ಕಿಟ್ಟಿವೆ. ಈ ಬೃಹತ್ ವಸ್ತು ಪ್ರದರ್ಶನದಲ್ಲಿ ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಮನೆ ಕಟ್ಟುವುದು, ಕಟ್ಟಡದ ಬಾಳಿಕೆಗೆ ಅನುಸರಿಸುವ ಕ್ರಮಗಳು ಕುರಿತ ಮಾಹಿತಿ. ಒಂದೇ ಸೂರಿನಡಿ ಸಿಮೆಂಟ್‌ನಿAದ ಸೋಲಾರವರೆಗೆ ಕಟ್ಟಡಕ್ಕೆ ಅಗತ್ಯವಿರುವ ಎಲ್ಲ ವಸ್ತುಗಳನ್ನು ಇಡಲಾಗಿದೆ ಎಂದರು.

ಹುಡಾ ಅಧ್ಯಕ್ಷ ಎಚ್.ಎನ್.ಎಫ್.ಮೊಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ಇಂಜಿನಿಯರರ್ಸ್ ಅಸೋಸಿಯೇಷನ್‌ನ ಕಟ್ಟಡಕ್ಕೆ ಭೂಮಿ ಮಂಜೂರು ಮಾಡುವ ಭರವಸೆ ನೀಡಿದರು.

ಕೊಟ್ಟೂರುಸ್ವಾಮಿ ಮಠದ ಕೊಟ್ಟೂರು ಬಸವಲಿಂಗ ಸ್ವಾಮಿ ಸಾನಿಧ್ಯವಹಿಸಿದರು. ಶ್ಯಾಮ್ ಮೆಟಾಲಿಕ್ಸ್ ಟೈಗರ್ ಟಿಎಂಟಿ ಕಂಬಿಗಳು ಕಂಪನಿ ಮುಖ್ಯಸ್ಥ ಬಲವಂತರಾವ್, ವಿಜಯನಗರ ಚೇಂಬರ ಕಾಮರ್ಸ್ ಅಧ್ಯಕ್ಷ ಅಶ್ವಿನ್ ಕೋತಂಬರಿ, ಪಿಡಿಐಟಿ ಇಂಜಿನಿಯರಿAಗ್ ಕಾಲೇಜಿನ ಅಧ್ಯಕ್ಷ ಕೆ.ಎಸ್.ಬಾದಾಮಿ, ಪ್ರಮುಖರಾದ ರಾಘವೇಂದ್ರ, ಚಂದ್ರಶೇಖರ, ಮೌಲಾಸಾಬ್, ರಾಮಾ ಜೋಶಿ, ಡಿ ಚಂದ್ರಶೇಖರ, ಅರುಣ್ ತೆಗ್ಗಿ, ಎಂ.ಗವಿಸಿದ್ದಯ್ಯ, ಅನಿಲ್ ಬಿ.ರೂಗೆ, ಎಚ್ ನಾರಾಯಣಪ್ಪ ಗಣಪ, ಅರುಣ್ ಕುಮಾರ್ ರಾಯಬಾಗಿ, ಗಣೇಶ್ ವೈದ್ಯ, ಎಸ್.ವೇಣುಗೋಪಾಲ್, ಉಮಾಪತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net