ಬುದ್ಧಿ ಇಲ್ಲದವರನ್ನು ಜಿ-20ಗೆ ಕರೀತಾರಾ?

Hospet Yatnal
ಹೊಸಪೇಟೆಯ ಶ್ರೀ ಕೊಟ್ಟೂರು ಸ್ವಾಮಿ ಮಠದಲ್ಲಿ ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಶನಿವಾರ ಚಾಲನೆ ನೀಡಿದರು.ಶ್ರೀ ಕೊಟ್ಟೂರು ಬಸವಲಿಂಗ ಸ್ವಾಮೀಜಿ, ಬಿಜೆಪಿ ಜಿಲ್ಲಾಧಕ್ಷ ಚನ್ನ ಬಸವನಗೌಡ ಪಾಟೀಲ್, ಸಂಸದ ವೈ.ದೇವೇಂದ್ರಪ್ಪ, ಹೂವಿನ ಹಡಗಲಿ ಶಾಸಕ ಕೃಷ್ಣನಾಯ್ಕ, ಯುವ ಮುಖಂಡ ಸಿದ್ಧಾರ್ಥ ಸಿಂಗ್, ಮಂಡಲ ಅಧ್ಯಕ್ಷ ಕಾಸಟಿ ಉಮಾಪತಿ, ಬ್ಯಾಲಹುಣ್ಸ್ಸಿ ರಾಮಣ್ಣ, ಸಾಲಿ ಸಿದ್ದಯ್ಯ ಇದ್ದರು.
Published on

ಹೊಸಪೇಟೆ: ನವದೆಹಲಿಯಲ್ಲಿ ಆಯೋಜಿಸಿರುವ ಜಿ-20 ಶೃಂಗ ಸಭೆಗೆ ರಾಹುಲ್ ಗಾಂಧಿಯನ್ನು ಕರೆಯದೆ ಬರೋಬ್ಬರಿ ಮಾಡಿದ್ದಾರೆ. ಬುದ್ಧಿ- ಗಿದ್ದಿ ಇಲ್ಲದವರನ್ನು ಕರೆದು ವಿಶ್ವದ ಮುಂದೆ ಭಾರತವನ್ನು ಏಕೆ ಅಪಮಾನ ಮಾಡ್ಕೋಬೇಕು ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಸ್ವಲ್ಪ ತಿಳಿವಳಿಕೆ ಇರುವವರನ್ನು ಮಹತ್ವದ ಸಭೆಗಳಿಗೆ ಕರೆಯುತ್ತಾರೆ ಎನ್ನುವ ಮೂಲಕ ರಾಹುಲ್ ಗಾಂಧಿ ಬಗ್ಗೆ ವ್ಯಂಗ್ಯವಾಡಿದರು.

ಭಾರತ ಎಂದೆಂದಿಗೂ ಭಾರತವಾಗಿರುತ್ತದೆ. ಇಂಡಿಯಾ ಹೆಸರು ಬ್ರಿಟಿಷರದ್ದು. ಅವರಿಗೆ ಕೆಲವೊಂದು ಊರಿನ ಹೆಸರು ಹೇಳಲಿಕ್ಕೆ ಬರ್ತಿದ್ದಿದ್ದಲ್ಲ. ಹೀಗಾಗಿ ಇಂಡಿಯಾ ಎಂದು ಕರೆಯುತ್ತಿದ್ದರು. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡ ನಿಲುವು ಸ್ವಾಗತಾರ್ಹ ಎಂದರು.

ಮೈತ್ರಿ ಬಗ್ಗೆ ಗೊತ್ತಿಲ್ಲ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ಪಕ್ಷದಿಂದ ಈವರೆಗೆ ಯಾವುದೇ ಅಧಿಕೃತ ಸೂಚನೆ ಬಂದಿಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಗೆ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ನನ್ನಗಂತೂ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net