ಲಂಚ ಪಡೆದ ನೌರಕನ ವಿರುದ್ಧ ಕ್ರಮೈಗೊಳ್ಳಿ

27 MANJU 03
Published on

ಹೊಸಪೇಟೆ: ಡಿಡಿಪಿಐ ಕಚೇರಿಯ ನೌಕರರೊಬ್ಬರು 500 ರೂ. ಲಂಚ ಸ್ವೀಕಾರ ಮಾಡಿ, ನನ್ನ ಪತ್ನಿಯ ಅಭಿಮತ ವರ್ಗಾವಣೆ ಆದೇಶಕ್ಕೆ ಚಾಲ್ತಿ ಆದೇಶ ನೀಡಿದ್ದಾರೆ. ಜಿಲ್ಲಾಧಿಕಾರಿ ಕ್ರಮಜರುಗಿಸಬೇಕು ಎಂದು ಭ್ರಷ್ಟಾಚಾರ ಮುಕ್ತ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಪ.ಯ.ಗಣೇಶ್ ಒತ್ತಾಯಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಡಿಪಿಐ ಕಚೇರಿಯಲ್ಲೇ ಈ ರೀತಿ ಭ್ರಷ್ಟಾಚಾರ ನಡೆದರೆ ಹೇಗೆ? ಬಳ್ಳಾರಿ ಜಿಲ್ಲೆಯಿಂದ ವಿಜಯನಗರ ಜಿಲ್ಲೆಗೆ 165 ರಿಂದ 200 ಶಿಕ್ಷಕರು ಅಭಿಮತ ವರ್ಗಾವಣೆ ಮೇಲೆ ಬಂದಿದ್ದಾರೆ. ಆದೇಶ ನೀಡಲು ಹಣ ಪಡೆಯುತ್ತಿರುವುದು ಸರಿಯಲ್ಲ. ನನ್ನ ಬಳಿಯೇ ಜು.29ರಂದು 500 ರೂ. ಲಂಚ ಕೇಳಿ ಪಡೆಯಲಾಗಿದೆ. ನಾನು ಇದರ ಡಿವಿಡಿ ಮಾಡಿಕೊಂಡಿರುವೆ. ಪೂರಕ ದಾಖಲೆಯನ್ನು ಸಲ್ಲಿಸುವೆ ಎಂದು ಬಿಡುಗಡೆಗೊಳಿಸಿದರು.

ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನಿಂದ ಹೊಸಪೇಟೆಗೆ ನನ್ನ ಪತ್ನಿ ವರ್ಗಾವಣೆ ಆಗಿತ್ತು. ವರ್ಗಾವಣೆ ಆದೇಶ ಪ್ರತಿ ಮತ್ತು ರಿಲಿವಿಂಗ್ ಆದೇಶ ನೀಡಲು ಕೂಡ ಬಳ್ಳಾರಿ ಡಿಡಿಪಿಐ ಕಚೇರಿಯಲ್ಲೂ ಲಂಚ ಕೇಳಲಾಯಿತು. ಅಲ್ಲಿ ನಾನು ಹಣ ನೀಡಿಲ್ಲ. ಆದರೆ, ವಿಜಯನಗರ ಡಿಡಿಪಿಐ ಕಚೇರಿಯಲ್ಲಿ ನೌಕರರೊಬ್ಬರಿಗೆ ಲಂಚ ಪಡೆದಿದ್ದಾರೆ. ವಿಡಿಯೋ ಚಿತ್ರೀಕರಣ ನನ್ನ ಬಳಿ ಇದೆ. ಇದನ್ನು ಕೂಡ ಜಿಲ್ಲಾಧಿಕಾರಿ, ಜಿಪಂ ಸಿಇಒ ಅವರಿಗೂ ಸಲ್ಲಿಸುವೆ ಎಂದರು.

ಡಿಡಿಪಿಐ ಕಚೇರಿಯ ಸಂಬAಧಿಸಿದ ನೌಕರನ ವಿರುದ್ಧ ಮತ್ತು ಆಗಿನ ಡಿಡಿಪಿಐ ಹಾಗೂ ಸಂಬAಧಿಸಿದ ಅಧಿಕಾರಿಗಳ ವಿರುದ್ಧ ಕ್ರಮಜರುಗಿಸಬೇಕು. ಇದೊಂದು ಗಂಭೀರ ಪ್ರಕರಣವಾಗಿದ್ದು, ಶಿಕ್ಷಣ ಇಲಾಖೆಯನ್ನು ಲಂಚ ಮುಕ್ತ ಮಾಡಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು. ಸಂಘಟನೆಯ ರಾಜ್ಯ ಪ್ರ. ಕಾರ್ಯದರ್ಶಿ ವರುಣ್ ತೋರಣಗಟ್ಟೆ ಇತರÀರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net