

ಹೊಸಪೇಟೆ : ಮೆದುಳಿನ ಆರೋಗ್ಯಕ್ಕಾಗಿ ಯೋಗ, ಧ್ಯಾನ ಹವ್ಯಾಸ ಅಗತ್ಯ ಎಂದು ಡಿಎಚ್‌ಒ ಡಾ.ಎಲ್.ಆರ್.ಶಂಕರ್ ನಾಯ್ಕ ಹೇಳಿದರು.
ರಾಜ್ಯ ಮೆದುಳು ಆರೋಗ್ಯ ಉಪಕ್ರಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸೋಮವಾರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ವಿಶ್ವ ಮೆದುಳು ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯನ ದೇಹದಲ್ಲಿ ಮೆದುಳು ಸಹ ಮುಖ್ಯ ಪಾತ್ರವಹಿಸುತ್ತದೆ. ದೈಹಿಕ ಚಟುವಟಿಕೆ, ಆರೋಗ್ಯಕರ ನಿದ್ರೆ, ಆರೋಗ್ಯಕರ ಹವ್ಯಾಸಗಳು, ಹೊಸ ಚಟುವಟಿಕೆಗಳು, ಸಂಘ ಜೀವಿಯಾಗಿರುವುದು ಸೇರಿದಂತೆ ಮುಂತಾದ ದೈನಂದಿನ ಚಟುವಟಿಕೆಗಳಿಂದ ಮೆದುಳನ್ನು ಆರೋಗ್ಯದಿಂದಡಬಹುದು. ಮಿತಿಮೀರಿ ಯೋಚನೆ ಮಾಡಿದಲ್ಲಿ ಅದು ನೇರವಾಗಿ ಮೆದುಳಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ದೇಹವನ್ನು ದೃಢವಾಗಿರಿಸಿಕೊಂಡಷ್ಟು ಮೆದುಳನ್ನು ಸಹ ದೃಢವಾಗಿರಿಸಿಕೊಳ್ಳಬಹುದು ಎಂದರು.
ಆರ್.ಸಿ.ಎಚ್. ಡಾ.ಜಂಬಯ್ಯ, ಡಿಎಚ್‌ಒ ಡಾ.ಡಿ.ಭಾಸ್ಕರ್, ವೈದ್ಯಾಧಿಕಾರಿಗಳಾದ ಡಾ.ಎನ್.ಸಲೀಂ, ಡಾ.ಕೆ.ರಾಧಿಕಾ, ಡಾ.ಜಗದೀಶ ಪಾಟ್ನೆ, ಡಾ.ಷಣ್ಮುಖ ನಾಯ್ಕ್, ಡಾ.ಕೆ.ಸೋಮಶೇಖರ, ಡಾ.ವಿನಯ್, ಡಾ.ಎಂ.ಪಿ.ದೊಡ್ಡಮನಿ, ಆರ್.ಗಿರೀಶ್, ಡಾ.ಸೋಮಶೇಖರ್ ಕಬ್ಬೇರ್ ಇತರರಿದ್ದರು.