

ಹೊಸಪೇಟೆ: ವಿಶ್ವದ ಏಕ್ಯತೆ ಮತ್ತು ವಿಶ್ವಾಸ ಪರಸ್ಪರ ಅಪೇಕ್ಷೆಗಳ ಭೇದವಿದ್ದರೂ ಏಕತೆಗೆ ಧ್ಯಾನ ಅಗತ್ಯವಾಗಿದೆ ಎಂದು ವಿಶ್ವ ಏಕತೆ ಮತ್ತು ವಿಶ್ವಾಸಕ್ಕಾಗಿ ಧ್ಯಾನ ಟ್ರ್ö್ಟನ ಮುಖ್ಯಸ್ಥೆ ಸುದೇಶ ದೀದಿಜಿ ಹೇಳಿದರು.
ಇಲ್ಲಿನ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಿಂದ ನಗರದ ಸುರಭಿ ಕಲ್ಯಾಣ ಮಂಟಪದಲ್ಲಿ ಬ್ರಹ್ಮಕುಮಾರಿಸ್ 2025-26ನೇ ವಾರ್ಷಿಕ ಸೇವಾ ಯೋಜನೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಾಂತಿಯಬೇದ, ವರ್ಣಬೇದ, ಲಿಂಗಬೇದ,ಆರ್ಥಿಕಬೇದಗಳ ನಡುವೆ ಆತ್ಮ ಮತ್ತ ಪರಮಾತ್ಮನ ಜೋಡನೆ ಧ್ಯಾನ. ಈ ಧ್ಯಾನದಿಂದ ಮಾತ್ರ ನಮ್ಮ ಪಂಚೇAದ್ರಿಗಳ ಆಪೇಕ್ಷೆ ಬೇರೆ ಬೇರೆಯಾದರೂ ಅವುಗಳ ಮಧ್ಯ ಸಾಮ್ಯತೆ ಇಲ್ಲದಿದ್ದರೆ ಏನನ್ನು ಸಾಧನೆ ಮಾಡಲಾಗದು. ನಾವು ಮಾಡುವ ಸಾಧನೆ ನಿಶ್ವಾರ್ಥವಾದಗ ಈ ಸಮನ್ವಯ ಸಾಧ್ಯವಾಗಲಿದೆ ಇದನ್ನು ರಾಜಯೋಗದಿಂದ ಮಾತ್ರ ಪಡೆಯಲು ಸಾಧ್ಯವಾಗಲಿದೆ ಎಂದರು.
ಬ್ರಹ್ಮ ಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಪ್ರಾಂತೀಯ ಮುಖ್ಯಸ್ಥ ಡಾ.ಬಿ.ಕೆ.ಬಸವರಾಜ ಮಾತನಾಡಿ, ಅಶಾಂತಿಯ ಮನಸ್ಥಿತಿಗೆ ಆಸೆ ಆಕಾಂಕ್ಷೆಗಳೆ ಕಾರಣ. ಈ ಕಾರಣಕ್ಕಾಗಿಯೆ ನಮಗೆ ದುಖಃ ಪ್ರಾತವಾಗಿದೆ ಇದನ್ನು ಸರಿದೂಗಿಸುವ ಕಾರ್ಯ ಪರಮಾತ್ಮನಿಂದ ಮಾತ್ರ ಸಾಧ್ಯವಾಗಲಿದೆ, ಇದು ಕಲಿಯುಗದ ಅಂತ್ಯದ ಸಂಕೇತವೂ ಹೌದಾಗಿದೆ. ಬ್ರಹ್ಮ ಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಇಂತಹ ಸತ್ಯವನ್ನು ತಿಳಿಸುವ ಮತು ಏಕತೆಯನ್ಮು ಸಾಧಿಸುವ ರಾಜಯೋಗದ ಮಾರ್ಗವನ್ನು ತಿಳಿಸಲಿದೆ ಸತ್ಯ ಅರಿಯುವ ದಾರಿಯನ್ನು ತೋರಿಸಲಿದ್ದು ನಾವೆಲ್ಲರೂ ಅದನ್ನು ಅರಿತು ವಿಶ್ವಶಾಂತಿಗೆ ಸಂದೇಶವನ್ನು ಸಾರಬೇಕು ಎಂದರು.
ಗದಗದ ಜಯಂತಿ ಅಕ್ಕ, ಗಂಗಾವತಿಯ ಸುಲೋಚನಾ ಅಕ್ಕ, ಆಲೂರಿನ ಲಕ್ಷ್ಮಿ ಅಕ್ಕ, ಯೋಗಿನಿ ಅಕ್ಕ, ಶಿವಮೊಗ್ಗದ ಸ್ವಾತಿ ಅಕ್ಕ, ನಗರದ ಸಂಚಾಲಕಿ ಮಾನಸ ಅಕ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕ ಸಿದ್ಧಲಿಂಗ ರಂಗಣ್ಣವರ, ನಿವೃತ್ತ ಪ್ರಾಚಾರ್ಯ ಎಸ್.ಎಂ.ಶಶಿಧರ ಇತರರಿದ್ದರು.