ರಕ್ತದಾನ ಮಾಡಿ ಜೀವ ಉಳಿಸಿ

06 MANJU 05
Published on

ಹೊಸಪೇಟೆ: ತಾಲೂಕಿನ ಭುವನಹಳ್ಳಿನಲ್ಲಿ ಭಾನುವಾರ ಕ್ರಿಕೆಟ್ ಕ್ಲಬ್‌ನಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು.

ಕ್ರಿಕೆಟ್ ಕ್ಲಬ್‌ನ ಸಂಚಾಲಕ ಟಿ.ಉಮಾಪತಿ ಮಾತನಾಡಿ ದಾನಗಳಲ್ಲಿ ಶ್ರೇಷ್ಠವಾದ ದಾನ ರಕ್ತ ದಾನವಾಗಿದ್ದು ಪ್ರತಿಯೊಬ್ಬರು ರಕ್ತ ದಾನ ಮಾಡುವುದರ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಬೇಕು ಎಂದು ಹೇಳಿದರು.

ಗಾದಿಗನೂರು ಗ್ರಾ.ಪಂ. ಅಧ್ಯಕ್ಷ ಚೌಡಕಿ ಚಂದ್ರಪ್ಪ ಶಿಭಿರ ಉದ್ಘಾಟಿಸಿದರು. ಶಿಬಿರದಲ್ಲಿ 37 ಜನ ರಕ್ತ ದಾನ ಮಾಡಿದರು. ರಕ್ತದಾನ ಮಾಡಿದವರಿಗೆ ನೆನಪಿನ ಕಾಣಿಕೆ ನೀಡಲಾಯಿತು. ಗ್ರಾಮ ಪಂಚಾಯಿತಿ ಸದಸ್ಯರಾದ ಸಣ್ಣ ಭರಮಪ್ಪ, ಬಸಪ್ಪ, ಶಿವಶರಣ, ಸಮಿತಿ ಅಧ್ಯಕ್ಷ ಮಂಜುನಾಥ, ಪ್ರಮುಖರಾದ ಹೊನ್ನೂರಸ್ವಾಮಿ, ಭೀಮಪ್ಪ, ತಿಮ್ಮಪ್ಪ, ಅಂಜಿ, ಶಂಕರ, ಬಸಪ್ಪ, ರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net